ಇದು ಹಳೆಯ ಭಾಲ್ಕಿ ಪಟ್ಟಣದ ಅಂಚಿನಲ್ಲಿದೆ. ಕುಂಭೇಶ್ವರ (ಗಣೇಶ್)‌ ದೇವಸ್ಥಾನ ಸೇರಿದಂತೆ ವಿವಿಧ ಕಟ್ಟಡಗಳನ್ನು ಹೊಂದಿದೆ. ಈ ಕೋಟೆಯನ್ನು ಸ್ಥಳೀಯವಾಗಿ ʼಗಡಿʼ ಎಂದು ಕರೆಯಲಾಗುತ್ತದೆ. (ಗಢ್‌ನಿಂದ ಇದು ಬಂದಿದೆ. ಕನ್ನಡ ಮತ್ತು ಮರಾಠಿಯಲ್ಲಿ ಇದಕ್ಕೆ ಕೋಟೆ ಎಂದರ್ಥ). ಜಂಗ್‌ ಬಹೂದ್ದೂರ್‌ನ ಆಡಳಿತಗಾರರಾಗಿದ್ದ ರಾಮಚಂದ್ರ ಜಾಧವ್‌ ಮತ್ತು ಧನಾಜಿ ಜಾಧವ್‌ ಇದನ್ನು 1820-1850 ರ ನಡುವೆ ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ. ಕಪ್ಪು ಬಸಾಲ್ಟ್‌ ಕಲ್ಲು ಮತ್ತು ಸುಣ್ಣದ ಗಾರೆ ಬಳಸಿ ನಿರ್ಮಿಸಲಾದ ಏಳು ಮೀಟರ್‌ ಎತ್ತರದ ಕೋಟೆಯು ಸುಮಾರು 18,000 ಚದರ ಮೀಟರ್‌ (ಐದು ಎಕರೆ) ಪ್ರದೇಶವನ್ನು ಆವರಿಸಿದೆ. ಕುಂಭೇಶ್ವರ (ಗಣೇಶ) ದೇವಾಲಯವು ಕೋಟೆಯ ಒಳಗಿದೆ. ಕೋಟೆಯ ಒಳಗೆ ತೆರೆದ ಬಾವಿಗಳು ಮತ್ತು ಅದರ ಹೊರಗೆ ಒಂದು ಸಣ್ಣ ಕೊಳವಿದೆ. ಆದರೂ ಅವೆಲ್ಲವೂ ಬತ್ತಿ ಹೋಗಿವೆ.

Leave a Reply

Your email address will not be published. Required fields are marked *