“ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ದಿವ್ಯೌಷಧ” ಎಂಬುದು ಸ್ವಾಮಿ ವಿವೇಕಾನಂದರ ನಿಲುವು. ಸಮಾಜದ ಎಲ್ಲ ವರ್ಗದವ ರಿಗೂ ಶಿಕ್ಷಣವು ತಲುಪಿ, ಜನರು ತಮ್ಮ ಪರಿಸ್ಥಿತಿಯನ್ನು ತಾವು ಅರ್ಥಮಾಡಿಕೊಳ್ಳುವಂತಹ ಸ್ಥಿತಿ ಉಂಟಾಗಬೇಕು. ಆಗ ಅವರು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ದೇಹಾರೋಗ್ಯ ಕೆಟ್ಟಾಗ ಔಷಧಿಯನ್ನು ತೆಗೆದುಕೊಂಡು ಮತ್ತೆ ಆರೋಗ್ಯವನ್ನು ಪಡೆಯುತ್ತೇವೆ ಹಾಗೆಯೇ ಸಮಾಜದ ಆರೋಗ್ಯಕ್ಕೂ ಶಿಕ್ಷಣವೆಂಬ ಔಷಧಿ ಆವಶ್ಯಕ. ಯಾವುದಾದರೂ ವಿಶೇಷ ಔಷಧಿ, ಆಹಾರ ಅಥವಾ ಟಾನಿಕ್ಕುಗಳ ಮೂಲಕ ದೇಹದ ಕೆಲವೇ ಅಂಗ ಗಳನ್ನು ದಷ್ಟಪುಷ್ಟಗೊಳಿಸಿದರೆ ಅದನ್ನು ಆರೋಗ್ಯವಂತ ಸ್ಥಿತಿ ಎಂದು ಕರೆಯಲಾಗುವುದಿಲ್ಲ, ಆದರಿಂದ ಒಟ್ಟು ದೇಹಕ್ಕೆ ಹಾನಿಯೇ ಉಂಟಾಗುತ್ತದೆ. ಹಾಗೆಯೇ ಶಿಕ್ಷಣವು ಸಮಾಜದ ಕೆಲವೇ ವರ್ಗ ಗಳಿಗೆ ಸೀಮಿತವಾಗಿದ್ದರೆ ಅದು ಒಟ್ಟು ಸಮಾಜಕ್ಕೆ ವಿಷಪ್ರಾಯವೇ ಆಗುತ್ತದೆ. ಶಿಕ್ಷಣವನ್ನು ಪಡೆದ ಕೆಲವೇ ವರ್ಗದವರಿಂದ ಇತರ ವರ್ಗದವರ ಶೋಷಣೆಯಾಗುತ್ತದೆ. ಇದರಿಂದ ಒಟ್ಟು ಸಮಾಜಕ್ಕೆ ಅಪಾರ ಹಾನಿಯುಂಟಾಗುತ್ತದೆ. ಆದ್ದರಿಂದ ಜನಸಾಮಾನ್ಯರಿಗೆ ಶಿಕ್ಷಣವು ತಲುಪಬೇಕೆಂದು ವಿವೇಕಾನಂದರು ಅತ್ಯಂತ ಕಳಕಳಿ ಯಿಂದ ಒತ್ತಿ ಹೇಳುತ್ತಾರೆ. ಅವರು ಅಪೇಕ್ಷಿಸಿದ ದಿವ್ಯೌಷಧಿಯಾಗಬಲ್ಲ ಶಿಕ್ಷಣ ಎಂತಹುದಿರಬೇಕು ಎಂಬುದನ್ನು ವಿಚಾರ ಮಾಡೋಣ.

ಹಿಂದೂ ಸಂಸ್ಕೃತಿಯಲ್ಲಿರುವ ಒಂದು ವೈಶಿಷ್ಟ್ಯವೆಂದರೆ ಅಲ್ಲಿ ಪ್ರತಿಯೊಂದು ವಿಷಯಕ್ಕೂ ಧರ್ಮವೇ ಕೇಂದ್ರವಾಗಿರುವುದು. ಸಾಹಿತ್ಯ, ಸಂಗೀತ, ಚಿತ್ರಕಲೆ, ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ, ಅವೆಲ್ಲ ಧರ್ಮವನ್ನೇ ಕೇಂದ್ರವನ್ನಾಗಿಟ್ಟುಕೊಂಡಿವೆ. ಹಾಗೆಯೇ ವಿವಿಧ ಮನರಂಜನಾ ಕಾರ್ಯಕ್ರಮಗಳೂ ಕೂಡಾ ಧರ್ಮದ ಸುತ್ತ ಹೆಣೆಯಲ್ಪಟ್ಟಿವೆ. ಯಕ್ಷಗಾನ, ನಾಟಕ, ನೃತ್ಯ ಇವು ಗಳಲ್ಲೆಲ್ಲ ಧಾರ್ಮಿಕ ವಿಷಯವೇ ಪ್ರಧಾನ. ಧಾರ್ಮಿಕ-ಆಧ್ಯಾತ್ಮಿಕ ಪ್ರಜ್ಞೆಯನ್ನು ಜನರಲ್ಲಿ ಉಳಿಸಿಕೊಂಡು ಬರಬೇಕು ಎಂಬ ದೃಷ್ಟಿ ಯಿಂದ ಹಿಂದಿನವರು ಈ ಒಂದು ಸಂಪ್ರದಾಯವನ್ನು ಮಾಡಿರು ವರು. ಹೀಗೆಯೇ ಶಿಕ್ಷಣದ ಹಿನ್ನೆಲೆಯೂ ಧರ್ಮವಾಗಿರಬೇಕು. ಆದ್ದರಿಂದ ಸ್ವಾಮಿ ವಿವೇಕಾನಂದರು, “ವಿದ್ಯಾಭ್ಯಾಸವೆಂದರೆ ನಮ್ಮೊಳಗೆ ಆಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿ”, ಎಂದು ಶಿಕ್ಷಣದ ನಿರ್ವಚನ ನೀಡುತ್ತಾರೆ. ಈ ಪರಿಪೂರ್ಣತೆಯ ಅಭಿವ್ಯಕ್ತಿಗೆ ತಡೆ ಯನ್ನುಂಟುಮಾಡುವುದು ರಾಗ, ದ್ವೇಷ, ಅಸೂಯೆ, ಅಹಂಕಾರ ಇತ್ಯಾದಿಗಳು. ಸೂರ್ಯನನ್ನು ಮೋಡ ಆವರಿಸುವಂತೆ ಇವು ನಮ್ಮ ಆತ್ಮವನ್ನು ಆವರಿಸುವುವು. ಇವನ್ನು ತೆಗೆದಾಗ ಆತ್ಮದ ಪರಿ ಪೂರ್ಣತೆ ಮತ್ತು ಸೌಂದರ್ಯ ಅಭಿವ್ಯಕ್ತವಾಗುವುವು. ಇದೇ ನಿಜ ವಾದ ಶಿಕ್ಷಣದ ಗುರಿ, ನಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುವುದು ಶಿಕ್ಷಣದ ಗುರಿ, ನೈತಿಕವಾಗಿ, ವೈಚಾರಿಕವಾಗಿ, ಕೆಲಸ ಕಾರ್ಯಗಳಲ್ಲಿ, ಓದುವುದರಲ್ಲಿ ಹೀಗೆ ಪ್ರತಿಯೊಂದರಲ್ಲೂ ನಾವು ಪರಿಪೂರ್ಣರಾಗಿರಬೇಕು. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಪರಿ ಪೂರ್ಣತೆ ಶಿಕ್ಷಣದ ಗುರಿ. ಅಂದರೆ ಪೂರ್ಣ ವ್ಯಕ್ತಿತ್ವದ ವಿಕಾಸ ವಾಗಬೇಕು.


ಸ್ವಾಮಿ ವಿವೇಕಾನಂದರ ಪ್ರಕಾರ ಕೇವಲ ವಿಷಯ ಸಂಗ್ರಹ ಶಿಕ್ಷಣದ ಗುರಿಯಲ್ಲ. ಅದೇ ಶಿಕ್ಷಣದ ಗುರಿಯಾಗಿದ್ದಿದ್ದರೆ ಪುಸ್ತಕ ಭಂಡಾರವನ್ನೇ ಒಬ್ಬ ವಿದ್ಯಾವಂತ ಎನ್ನಬಹುದಿತ್ತು. ಒಂದೊಂದು ಪುಸ್ತಕದಲ್ಲೂ ಎಷ್ಟೊಂದು ವಿಷಯಸಂಗ್ರಹವಿರುತ್ತದೆ! ಆದರೆ ಪುಸ್ತಕ ಕೇವಲ ಪುಸ್ತಕವೇ, ಬರಿಯ ವಿಷಯಸಂಗ್ರಹದಿಂದ ನಾವು ಒಂದು ಚಲಿಸುವ ವಿಶ್ವಕೋಶ ಆಗುತ್ತೇವೆ. ಅಷ್ಟೇ, ಮಾಹಿತಿ ಸಂಗ್ರಹ ಶಿಕ್ಷಣವಲ್ಲ. ಅತಿಯಾದ ಮಾಹಿತಿ ಸಂಗ್ರಹದಿಂದ ನಾವು ವಿಚಾರಶಕ್ತಿಯನ್ನೂ ಕಳೆದುಕೊಳುತ್ತೇವೆ, ಜ್ಞಾನಾಭಿರುಚಿಯೂ ಹೊರಟುಹೋಗುತ್ತದೆ, ಎಂದು ಪ್ರಾಜ್ಞರು ಹೇಳುತ್ತಾರೆ. ಈ ವಿಷಯದಲ್ಲಿ ವಿವೇಕಾನಂದರ ವಾಣಿಯನ್ನು ಕೇಳೋಣ: ವಿದ್ಯಾ ಭ್ಯಾಸವೆಂದರೆ ನಿಮ್ಮ ತಲೆಗೆ ತುಂಬಿದ ವಿಷಯಗಳ ಮೊತ್ತವಲ್ಲ. ಅದು ಅಲ್ಲಿ ಜೀರ್ಣವಾಗದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ…. ನೀವು ಐದು ವಿಷಯಗಳನ್ನು ತಿಳಿದು, ಅವನ್ನು ನಿಮ್ಮ ಜೀವನದಲ್ಲಿ, ಶೀಲದಲ್ಲಿ ಅನುಷ್ಠಾನಕ್ಕೆ ತಂದರೆ ಇಡಿಯ ಪುಸ್ತಕಭಂಡಾರವನ್ನೇ ಕಂಠಪಾಠಮಾಡಿದವನಿಗಿಂತ ಹೆಚ್ಚು ವಿದ್ಯೆ ನಿಮಗೆ ಇದೆ. ‘ಯಥಾ ಖರಶ್ಚಂದನ ಭಾರವಾಹೀ ಭಾರಸ್ಯ ವೇತ್ತಾನ ತು ಚಂದನಸ್ಯ ಗಂಧದ ಮರವನ್ನು ಹೊರುವ ಕತ್ತೆಗೆ ಅದರ ಭಾರ ಮಾತ್ರ ಗೊತ್ತು. ಅದರ ಗುಣ ಗೊತ್ತಿರುವುದಿಲ್ಲ.”

ನಾವು ತಿಂದ ಆಹಾರವನ್ನು ಸರಿಯಾಗಿ ಅರಗಿಸಿಕೊಂಡಾಗ ಅದು ನಮಗೆ ದೈಹಿಕ ಶಕ್ತಿಯನ್ನೂ ಪೌಷ್ಟಿಕತೆಯನ್ನೂ ನೀಡುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದರೆ ಅಜೀರ್ಣದಿಂದ ಅನೇಕ ರೋಗಗಳು ಉಂಟಾಗುತ್ತವೆ. ಹಾಗೆಯೇ ಸರಿಯಾಗಿ ಅರಗಿಸಿ ಕೊಳ್ಳದ ಮಾಹಿತಿಗಳೂ ಬೌದ್ಧಿಕ ಅಜೀರ್ಣರೋಗಕ್ಕೆ ಕಾರಣ ವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಕಣ್ಣು ಮುಚ್ಚಿಕೊಂಡು ಸಿಕ್ಕಿದ ಮಾಹಿತಿಗಳನ್ನೆಲ್ಲ ನುಂಗುವುದಲ್ಲ. ನಾವು ಪಡೆದ ಜ್ಞಾನವನ್ನು ವಿಚಾರದ ಮೂಲಕ ಮೆಲುಕು ಹಾಕಬೇಕು, ಅದು ನಮ್ಮ ವ್ಯಕ್ತಿತ್ವದೊಡನೆ ಒಂದಾಗಬೇಕು, ನಮ್ಮ ನಡೆ ನುಡಿ ಗಳಲ್ಲಿ ಪ್ರತಿಫಲಿಸಬೇಕು. ಆಗ ನಮ್ಮ ಇಡೀ ವ್ಯಕ್ತಿತ್ವ ಆರೋಗ್ಯ ವಂತವಾಗುತ್ತದೆ. ಜ್ಞಾನವನ್ನು ಸರಿಯಾಗಿ ಅರಗಿಸಿಕೊಳ್ಳಬೇಕಾದರೆ ನಾವು ವಿಚಾರಪರರಾಗಬೇಕು. ಪ್ರಶ್ನಿಸುವ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು. ಇದರಿಂದ ಪಡೆದ ಜ್ಞಾನವು ಸರಿಯಾಗಿ ಮಥಿಸಲ್ಪಟ್ಟು ಅದು ನಮ್ಮ ವ್ಯಕ್ತಿತ್ವ ವ್ಯವಸ್ಥೆಯೊಂದಿಗೆ ಒಂದಾಗುತ್ತದೆ. ಆಗ ಮನಶಕ್ತಿ ವೃದ್ಧಿಯಾಗುತ್ತದೆ. ದೇಹಕ್ಕೆ ಆಹಾರ ಮತ್ತು ವ್ಯಾಯಾಮ ಎರಡೂ ಬೇಕಾಗಿರುವಂತೆ ಮನಸ್ಸಿಗೂ ಬೆಳೆಯಲು ಜ್ಞಾನಾಹಾರ ಮತ್ತು ವೈಚಾರಿಕ ವ್ಯಾಯಾಮ ಎರಡೂ ಬೇಕು. ಶಿಕ್ಷಣ ಇವೆರಡನ್ನೂ ಒದಗಿಸಬೇಕು.


ಪರಿಪೂರ್ಣತೆ ನಮ್ಮೊಳಗೇ ಇದೆ ನಾವು ಹೊರಗಡೆಯಿಂದ ಪಡೆಯ ಬೇಕಾಗಿಲ್ಲ ಎಂದು ವಿವೇಕಾನಂದರು ಹೇಳುತ್ತಾರೆ. ನಮ್ಮೊಳಗೆ ಪವಿತ್ರತೆ, ದಿವ್ಯತೆ, ಶಕ್ತಿ, ಪರಿಪೂರ್ಣತೆ ಎಲ್ಲ ಇವೆ. ಇವೆಲ್ಲ ನಮ್ಮ ಆತ್ಮದ ಗುಣಗಳು. ಈ ಆತ್ಮದ ವಿಕಾಸವೇ, ಅಂದರೆ ಈ ಎಲ್ಲ ಗುಣಗಳನ್ನು ಪ್ರಕಾಶಗೊಳಿಸುವುದೇ ಶಿಕ್ಷಣದ ಗುರಿ. ಆತ್ಮವಿಕಾಸಗೊಂಡಂತೆ ಎಲ್ಲ ಉನ್ನತ ಮೌಲ್ಯಗಳು ನಮ್ಮದಾಗುವುವು, ಸ್ವಾಮಿ ವಿವೇಕಾನಂದರು ಹೇಳುತ್ತಾರೆ: “ಸುಪ್ತಾತ್ಮವು ಜಾಗೃತವಾಗಿ ಕ್ರಿಯಾ ಶೀಲವಾದಾಗ ಶಕ್ತಿ, ಒಳ್ಳೆಯತನ, ವೈಭವಗಳು ಬರುತ್ತವೆ, ಉತ್ಕೃಷ್ಟ ವಾದುದೆಲ್ಲವೂ ಬರುತ್ತವೆ.” ಈ ದೃಷ್ಟಿಯಿಂದ ನೋಡಿದಾಗ ಪ್ರೀತಿ, ಸಹಾನುಭೂತಿ, ದಯೆ, ಎಲ್ಲ ನೈತಿಕ ಸದ್ಗುಣಗಳು ಇವೇ ಮುಂತಾದ ಉನ್ನತ ಮೌಲ್ಯಗಳು ಅಧ್ಯಾತ್ಮ ಮೂಲದಿಂದ ಬರುತ್ತವೆ. ಇವು ಗಳನ್ನು ನಾವು ಜಡ ಪ್ರಕೃತಿಯಿಂದ (Matter) ಪಡೆಯಲಾರೆವು. ಎಲ್ಲ ಸೂಕ್ಷ್ಮ ಭಾವ ಮತ್ತು ಸಂವೇದನೆಗಳು ಆತ್ಮಾಭಿವ್ಯಕ್ತಿಯ ಪರಿಣಾಮ. ವಿದ್ಯುಚ್ಛಕ್ತಿ ನಮ್ಮ ಕಣ್ಣಿಗೆ ಕಾಣದೆ ಇರಬಹುದು. ಆದರೆ ಅದರ ಅಭಿವ್ಯಕ್ತಿಯನ್ನು ನಾವು ನೋಡುತ್ತೇವೆ. ಬಲು ಮುಂತಾದವುಗಳಲ್ಲಿ ಅದು ಬೆಳಕಾಗಿ ವ್ಯಕ್ತವಾಗುತ್ತದೆ, ವಿದ್ಯುತ್ ಸೈನಲ್ಲಿ ಶಾಖವಾಗಿ ವ್ಯಕ್ತವಾಗುತ್ತದೆ ಇತ್ಯಾದಿ. ಹಾಗೆಯೆ ಆತ್ಮ ಅಥವಾ ದಿವ್ಯತೆ ಅಥವಾ ಆಧ್ಯಾತ್ಮ ಸ್ವರೂಪ ಉನ್ನತ ಮೌಲ್ಯಗಳ ರೂಪದಲ್ಲಿ ವ್ಯಕ್ತವಾಗುತ್ತದೆ. ಶಿಕ್ಷಣ ಈ ಮೌಲ್ಯಗಳ ಹೊರ ಹೊಮ್ಮುವಿಕೆಗೆ ಪೂರಕವಾಗಿರಬೇಕು. ಒಂದು ಹೂವು ಮೊಗ್ಗಾ ಗಿರುವಾಗ ಅದರ ಸುವಾಸನೆ, ಸೌಂದರ್ಯ ಯಾವುದೂ ತಿಳಿಯು ವುದಿಲ್ಲ. ಅದು ಅರಳಿದಂತೆಲ್ಲ ಅದರ ಎಲ್ಲ ಗುಣಗಳೂ ಹೊರ ಬರುವುವು. ಹಾಗೆಯೇ ನಮ್ಮ ಅಂತರಾತ್ಮವು ಅರಳಿದಾಗ, ನಮ್ಮ ದಿವ್ಯತೆಯ ಪ್ರಜ್ಞೆ ನಮಗಾದಾಗ ಶಕ್ತಿ, ಸಾಮರ್ಥ್ಯ, ಪವಿತ್ರತೆ, ಪರಿ ಪೂರ್ಣತೆ ಎಲ್ಲ ಬರುವುವು. ಇದು ಶಿಕ್ಷಣದ ಒಂದು ಬಹು ಮುಖ್ಯ ಗುರಿ. ಅದಕ್ಕಾಗಿಯೇ ಸ್ವಾಮೀಜಿ ಧರ್ಮವೇ ಶಿಕ್ಷಣದ ಕೇಂದ್ರ “I look upon religion as the inner most core of education” ಎಂದರು. ಇಲ್ಲಿ ಧರ್ಮ ಎಂದರೆ ಮತಾಚರಣೆ ಗಳಲ್ಲ ಸಾಧನೆಗಳ ಮೂಲಕ ಪ್ರಕಾಶವನ್ನು ಹೊರಹೊಮ್ಮಿಸುವುದು.

ಆದ್ದರಿಂದ ಶಿಕ್ಷಣವೆಂದರೆ ಹೊರಗಿನಿಂದ ಏನನ್ನೂ ಪಡೆ ಯುವುದಲ್ಲ. ಶಿಕ್ಷಕ ಮಗುವಿಗೆ ಏನನ್ನೂ ಹೊಸದಾಗಿ ಕಲಿಸುವು ದಿಲ್ಲ. ಮಗುವು ತನ್ನಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವುದೇ ಶಿಕ್ಷಣ” ಎಂದು ಎರಿಕ್ ಫ್ರಮ್ ಎಂಬ ಪ್ರಸಿದ್ಧ ಮನಶ್ಯಾಸ್ತ್ರಜ್ಞರು ಹೇಳುತ್ತಾರೆ. ವಿವೇಕಾ ನಂದರು ಇದನ್ನು ಒಂದು ಉದಾಹರಣೆಯ ಮೂಲಕ ವಿವರಿಸು ತ್ತಾರೆ: ಇಲ್ಲಿ ಒಂದು ಬೀಜವಿದೆ. ಆ ಬೀಜದಲ್ಲಿ ಮರವಾಗಿ ಬೆಳೆ ಯವ ಸಾಮರ್ಥ್ಯ ಆಗಲೇ ಇದೆ. ನಾವದನ್ನು ನೆಲದಲ್ಲಿ ಬಿತ್ತಿ ನೀರು ಗೊಬ್ಬರ ಹಾಕುತ್ತೇವೆ. ಬೇರೆ ಪ್ರಾಣಿಗಳು ಅದನ್ನು ತಿನ್ನದಿರಲೆಂದು ಒಂದು ಬೇಲಿ ಕಟ್ಟುತ್ತೇವೆ. ಬೀಜ ತಾನಾಗಿಯೇ ಬೆಳೆದು ಗಿಡವಾಗಿ ಮರವಾಗುತ್ತದೆ. ಅದು ಬೆಳೆಯುವುದಕ್ಕೆ ನಾವೊಂದು ಅವಕಾಶ ಕಲ್ಪಿಸಿ ಕೊಡುತ್ತೇವಷ್ಟೆ. ಈ ಸ್ಕೂಲು, ಕಾಲೇಜು, ವಿಶ್ವವಿದ್ಯಾಲಯ ಇವುಗಳೆಲ್ಲ ಮಗು ಬೆಳೆಯುವುದಕ್ಕೆ ಅಂದರೆ ತನ್ನೊಳಗಿನ ಶಕ್ತಿಯನ್ನು, ಪ್ರತಿಭೆಯನ್ನು, ಜ್ಞಾನವನ್ನು ಪರಿಪೂರ್ಣತೆಯನ್ನು ಅಭಿವ್ಯಕ್ತಗೊಳಿಸುವುದಕ್ಕೆ ಕಲ್ಪಿಸಿರುವ ಅವಕಾಶಗಳು, ಗಿಡವನ್ನು ಸರಿಯಾಗಿ ಬೆಳೆಸಿದರೆ ಅದು ಆರೋಗ್ಯಕರವಾದ ಮರವಾಗಿ ಬೆಳೆದು ಉತ್ತಮ ಫಲವನ್ನು ನೀಡುವುದು. ಹಾಗೆಯೆ ಎಲ್ಲ ಶಿಕ್ಷಣ ಸಂಸ್ಥೆ ಗಳೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ, ಉಪಾಧ್ಯಾಯ ರೆಲ್ಲ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ಪಾಲಿಸಿದರೆ ಮಗುವೂ ಉತ್ತಮ ಪ್ರಜೆಯಾಗಿ ಬೆಳೆದು, ಸಮಾಜಕ್ಕೆ ಒಳಿತನ್ನು ಉಂಟು ಮಾಡುತ್ತದೆ.

ಕೈಗಾರಿಕಾ ಬೆಳವಣಿಗೆಯೇ ದೇಶದ ಮುಖ್ಯ ಗುರಿಯಾಗಿರುವು ದರಿಂದ ಶಿಕ್ಷಣವು ಇಂಜಿನಿಯರುಗಳು, ವಿಜ್ಞಾನಿಗಳು, ತಂತ್ರಜ್ಞರು, ವೈದ್ಯರು, ಗುಮಾಸ್ತರು ಇವರುಗಳನ್ನು ಉತ್ಪಾದಿಸುವುದರಲ್ಲಿಯೇ ನಿರತವಾಗಿದೆ, ಮನುಷ್ಯ ನಿರ್ಮಾಣದಲ್ಲಲ್ಲ. ವ್ಯಕ್ತಿಯ ಸರ್ವತೋ ಮುಖ ವಿಕಾಸವೇ ಶಿಕ್ಷಣದ ಗುರಿ ಎಂಬುದನ್ನು ಮರೆತೇಬಿಟ್ಟಂತಿದೆ. ಹೇಗಾದರೂ ಮಾಡಿ ಪರೀಕ್ಷೆಯಲ್ಲಿ ಪಾಸಾಗಿ, ಒಂದು ಡಿಗ್ರಿ ಪಡೆದು ಕೆಲಸ ಸಿಕ್ಕಿದರೆ ಸಾಕು (ಕೆಲಸವಿಲ್ಲದಿದ್ದರೂ ಪರವಾಗಿಲ್ಲ, ಸಂಬಳ ಸಿಕ್ಕಿದರೆ ಸಾಕು) ಎಂದೇಎಲ್ಲರೂ ಯೋಚಿಸುವುದು. ಇಂದಿನ ಯುವಕರಲ್ಲಿ ಧನಾಸಕ್ತಿಯೇ ತೀವ್ರವಾಗಿದ್ದು ಸೇವಾ ಮನೋಭಾವ ದಿಂದ ವಿಮುಖರಾಗಿರುವುದು ತುಂಬ ಶೋಚನೀಯ. ಎಲ್ಲ ವೃತ್ತಿ ಗಳಲ್ಲಿಯೂ ಧನಾರ್ಜನೆಯೇ ಪ್ರಧಾನವಾಗಿ ತಮ್ಮ ವೃತ್ತಿಗಳ ಮೂಲಕ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬೇಕೆಂಬ ಪ್ರವೃತ್ತಿ ಸಂಪೂರ್ಣ ಕಾಣೆಯಾದಂತಿದೆ. ಎಲ್ಲರೂ ಮಾನವೀಯತೆಯಿಂದ ದೂರವಾಗುತ್ತಿದ್ದಾರೆ. ಮಾನವೀಯತೆಯನ್ನು ಕಲಿಸದ ಶಿಕ್ಷಣ ವ್ಯಕ್ತಿಗೂ ಸಮಾಜಕ್ಕೂ ಹಾನಿಯನ್ನು ಉಂಟು ಮಾಡುತ್ತದೆ. ವೃತ್ತಿ ಪರ ಶಿಕ್ಷಣ ವ್ಯಕ್ತಿಪರವೂ ಆಗದಿದ್ದರೆ ಅನೈತಿಕತೆಯ ಹೆಚ್ಚಳದಿಂದ ವೃತ್ತಿಯೂ ಸಾರ್ಥಕತೆಯನ್ನು ಪಡೆಯುವುದಿಲ್ಲ.


ಸ್ವಾಮಿ ವಿವೇಕಾನಂದರ ಪ್ರಕಾರ ಶಿಕ್ಷಣವು ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು ಅವನು ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕು ಬಿ.ಎ., ಎಂ.ಎ. ಪಾಸು ಮಾಡಿ ಆಫೀಸಿನಿಂದ ಆಫೀಸಿಗೆ ಅಲೆಯುವಂತಾಗಬಾರದು. ತನಗೆ ತಾನೇ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವಂತಹ ಸಾಮರ್ಥ್ಯ ಅವನಿಗೆ ಶಿಕ್ಷಣದಿಂದ ದೊರೆಯಬೇಕು. ಇದಕ್ಕೆ ಬದಲು ಈಗ ಶಿಕ್ಷಣವು ಕ್ತಿಗಳನ್ನು ಸಾಂಪ್ರದಾಯಿಕ ವೃತ್ತಿಯಿಂದ ವಿಮುಖಗೊಳಿಸಿ ಅವರನ್ನು ಕುರ್ಚಿಬದ್ಧರನ್ನಾಗಿಸುತ್ತಿದೆ. ಅಸಂಖ್ಯ ಯುವಕರು ಸಾಂಪ್ರದಾಯಿಕ ಕೆಲಸವೂ ಇಲ್ಲದೆ ಆಫೀಸ್ ಕೆಲಸವೂ ದೊರೆಯದೆ ಸೋಮಾರಿಗಳಾಗಿ ಅಲೆಯುವಂತಾಗಿದೆ. ಇಂದಿನ ಶಿಕ್ಷಣವು ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ನಿರ್ಮಾಣ ಮಾಡುತ್ತಿದೆ. ಇದರಿಂದ ಅವರು ಜೀವನದಲ್ಲಿ ನಿಃಸಾರ್ಥಕತೆಯನ್ನು, ಆಂತರಿಕ ಶೂನ್ಯತೆ ಯನ್ನು ಕಾಣುತ್ತಿದ್ದಾರೆ. ಅವರ ಜೀವನವೇ ಅವರಿಗೆ ಹೊರೆಯಾಗು ತಿದೆ. ವ್ಯಕ್ತಿಯು ತನಗೆ ತಾನೇ ಹೊರೆಯಾದಾಗ ಅವನು ಸಮಾಜಕ್ಕೂ ಹೊರೆಯಾಗುತ್ತಾನೆ. ಇಂದು ಹೆಚ್ಚಿನವರು ಪಡೆಯುವ ಶಿಕ್ಷಣವು ವೃತ್ತಿಗೂ ಸಂಬಂಧಿಸಿರುವುದಿಲ್ಲ. ವ್ಯಕ್ತಿಗೂ ಸಂಬಂಧಿಸಿರುವುದಿಲ್ಲ. ಅಷ್ಟೊಂದು ಧನವ್ಯಯದಿಂದ ಧೀರ್ಘಾವಧಿಯಲ್ಲಿ ಗಳಿಸಿದ ಶಿಕ್ಷಣ ವ್ಯರ್ಥವಾಗಿ ಹೋಗುತ್ತದೆ. ವ್ಯಕ್ತಿಯು ಭೌತಿಕವಾಗಿ ಮಾತ್ರವಲ್ಲದೆ ವೈಚಾರಿಕವಾಗಿಯೂ ಭಾವನಾತ್ಮಕವಾಗಿಯೂ ಪರಾವಲಂಬಿಯಾಗುತ್ತಾನೆ.


ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣವು ವಿಚಾರಸ್ವಾತಂತ್ರ ವನ್ನು ನೀಡಬೇಕು. ತಾನೇ ಸ್ವತಂತ್ರವಾಗಿ ವಿಚಾರಮಾಡಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಣಯಿಸುವ ಸಾಮರ್ಥ್ಯ ಅವನಿಗೆ ಶಿಕ್ಷಣದಿಂದ ಬರಬೇಕು. ಈಗ ವೈಚಾರಿಕ ಪರಿಧಿ ಬಹಳ ವಿಸ್ತಾರವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಅನೇಕ ಮತಪಂಥ ಗಳು ಹುಟ್ಟಿಕೊಂಡಿವೆ. ಹಲವಾರು ಪ್ರಭಾವಗಳಿಗೆ ವ್ಯಕ್ತಿ ಒಳಗಾಗು ತಾನೆ. ಸ್ವತಂತ್ರ ವಿಚಾರಧಾರೆ ನಮಗೆ ಇಲ್ಲದಿದ್ದರೆ ನಾವು ಗಾಳಿಗೆ ತೂರಾಡುವ ತರಗೆಲೆಯಂತಾಗಿಬಿಡುತ್ತೇವೆ. ಶಿಕ್ಷಣ ನಮಗೆ ಪ್ರೌಢಿ ಮೆಯನ್ನು ನೀಡಬೇಕು ಅಂದರೆ ನಮಗೆ ಭಾವನಾತ್ಮಕ ಸ್ವಾತಂತ್ರ್ಯ ವನ್ನು ನೀಡಬೇಕು. ಚಿಕ್ಕಮಕ್ಕಳಂತೆ ಇತರರ ಪ್ರೀತಿ, ಸಹಾನುಭೂತಿ, ಪ್ರಶಂಸೆಗಳಿಗಾಗಿ ಹಾತೊರೆಯುವ ಪ್ರವೃತ್ತಿ ಆರೋಗ್ಯಕರವಲ್ಲ. ಇಂತಹ ಪ್ರವೃತ್ತಿ ಇದ್ದರೆ ಎಷ್ಟೇ ಪ್ರೀತಿ, ಸಹಾನುಭೂತಿ, ಪ್ರಶಂಸೆ ಇತ್ಯಾದಿಗಳಿದ್ದರೂ ವ್ಯಕ್ತಿ ಒಂಟಿತನವನ್ನು ಅನುಭವಿಸುತ್ತಾನೆ. ವ್ಯಕ್ತಿಯು ತುಂಬು ಜೀವನವನ್ನು, ಸಾರ್ಥಕ ಜೀವನವನ್ನು ನಡೆಸುವಂತಾದರೆ ಒಂಟಿತನದ ಭಾವ ಇರುವುದಿಲ್ಲ ಮತ್ತು ಭಾವನಾತ್ಮಕ ಪರಾವಲಂಬ ನೆಯೂ ಇರುವುದಿಲ್ಲ. ಪ್ರೀತಿ, ಸಹಾನುಭೂತಿ, ಪ್ರಶಂಸೆ ಇತ್ಯಾದಿ ಗಳನ್ನು ಇತರರಿಂದ ಬಯಸುವ ಬದಲು ತಾನೇ ಇತರರಿಗೆ ಅವನ್ನು ನೀಡುವಂತಹ ಸ್ಥಿತಿ ಉಂಟಾಗಬೇಕು. ಇಂತಹ ಹಿರಿತನವನ್ನು, ಉದಾರತೆಯನ್ನು ಶಿಕ್ಷಣವು ವ್ಯಕ್ತಿಗೆ ನೀಡಬೇಕು. ಇಂದಿನ ಶಿಕ್ಷಣವು ವ್ಯಕ್ತಿಯನ್ನು ದೊಡ್ಡವನನ್ನಾಗಿ ಮಾಡದೆ ಕುಬ್ಬನನ್ನಾಗಿಸುತ್ತಿದೆ; ಅವನು ಹಿರಿತನವನ್ನಲ್ಲದೆ ಸಿರಿತನವನ್ನು ಬಯಸುವಂತೆ ಮಾಡುತ್ತಿದೆ.

ಶೀಲನಿರ್ಮಾಣವೆ ಶಿಕ್ಷಣದ ಮೂಲಭೂತ ಧೈಯವೆಂಬುದು ವಿವೇಕಾನಂದರ ಅಭಿಪ್ರಾಯ. ನಮ್ಮ ಜೀವನವನ್ನು ರೂಪಿಸುವ, ನಮ್ಮನ್ನು ಮನುಷ್ಯರನ್ನಾಗಿ ಮಾಡುವ ಮತ್ತು ಶೀಲನಿರ್ಮಾಣ ಮಾಡುವ ರೀತಿಯಲ್ಲಿ ನಾವು ವಿಚಾರಗಳನ್ನು ಅರಗಿಸಿಕೊಳ್ಳಬೇಕು” ಎಂದು ಅವರು ಹೇಳುತ್ತಾರೆ. ನೈತಿಕ ಪರಿಪೂರ್ಣತೆ ಇಲ್ಲದೆ ನಾವು ಪಡೆದ ಜ್ಞಾನವನ್ನು ಸರಿಯಾದ ರೀತಿಯಲ್ಲಿ, ಸೃಜನಾತ್ಮಕವಾಗಿ ಉಪಯೋಗಿಸಲಾಗುವುದಿಲ್ಲ. ನಮ್ಮ ಮೇಲೆ ನಮಗೆ ಹತೋಟಿ ಯಿರುವುದಿಲ್ಲ. ಜ್ಞಾನವೆಂಬುದು ಶಕ್ತಿ-ಒಂದು ಹರಿತವಾದ ಆಯುಧವಿದ್ದಂತೆ. ಈ ಆಯುಧವನ್ನು ಅನೈತಿಕ, ಕ್ರೂರ ಮತ್ತು ಬೇಜವಾಬ್ದಾರಿಯ ವ್ಯಕ್ತಿಗೆ ಕೊಟ್ಟರೆ ಅವನು ಅದನ್ನು ಕೆಟ್ಟದ್ದಕ್ಕೆ, ನಾಶಮಾಡುವುದಕ್ಕೆ ಉಪಯೋಗಿಸುತ್ತಾನೆ. ಅದೇ ಆಯುಧವನ್ನು ಉತ್ತಮ ಶೀಲವಂತ, ಜವಾಬ್ದಾರಿಯುತ ವ್ಯಕ್ತಿಗೆ ನೀಡಿದರೆ ಅವನು ಅದನ್ನು ರಚನಾತ್ಮಕವಾಗಿ ಉಪಯೋಗಿಸುತ್ತಾನೆ. ನಾವು ಆಯುಧ ವನ್ನು ವ್ಯಕ್ತಿಗಳಿಗೆ ಅದನ್ನು ಉಪಯೋಗಿಸುವ ವಿಧಾನವನ್ನು ತಿಳಿಸಿ ಕೊಡದೆ ಕೊಡುತ್ತಿದ್ದೇವೆ. ಇದು ಒಂದು ಮಗುವಿಗೆ ಆಯುಧವನ್ನು ಕೊಟ್ಟಂತಾಗುತ್ತಿದೆ. ಅದು ಆ ಆಯುಧದಿಂದ ಕೈಗೆ ಸಿಕ್ಕಿದ್ದನ್ನೆಲ್ಲ ಕತ್ತರಿಸುತ್ತದೆ ಮತ್ತು ತನ್ನ ಕೈಯನ್ನೂ ಕತ್ತರಿಸಿಕೊಳ್ಳುತ್ತದೆ.


ನೈತಿಕತೆ ಇಲ್ಲದೆ ಅಪಾರ ಯುವಶಕ್ತಿ ವಿನಾಶಕರ ಶಕ್ತಿಯಾಗಿ ಪರಿಣಮಿಸುವ ಸಂಭವ ಹೆಚ್ಚು. ನೈತಿಕ ಪ್ರಜ್ಞೆ, ನಮ್ಮನ್ನು ಜವಾಬ್ದಾರಿ ಯುತರನ್ನಾಗಿ ಮಾಡುವುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜವಾಬ್ದಾರಿಯನ್ನು ಮನಗಂಡರೆ ಮುಷ್ಕರ, ಫೇರಾವ್, ಹೊಡೆ ದಾಟ, ಇತರ ವಿಧ್ವಂಸಕ ಕೃತ್ಯಗಳು ಇವಾವುವೂ ಇರುವುದಿಲ್ಲ. ಇಂಗ್ಲಿಷ್‌ನಲ್ಲಿ ತೊಂದರೆಕೊಡುವವರನ್ನು ಕುರಿತಾದ ಒಂದು The man who rows the boat, seldom has time to rock it “ದೋಣಿ ನಡೆಸುವವನು ಅದನ್ನು ಮುಳುಗಿಸುವ ಪ್ರಯತ್ನ ಎಂದೂ ಮಾಡುವುದಿಲ್ಲ.” ಜವಾಬ್ದಾರಿಯ ಪ್ರಜ್ಞೆಯುಳ್ಳ ವನಾವನೂ ವಿನಾಶಾತ್ಮಕ ಕಾರ್ಯದಲ್ಲಿ ತೊಡಗುವುದಿಲ್ಲ. ಯಾವಾ ಗಲೂ ರಚನಾತ್ಮಕ ಚಟುವಟಿಕೆಯಲ್ಲೇ ತೊಡಗಿರುತ್ತಾನೆ. ಜವಾಬ್ದಾರಿಯ ಪ್ರಜ್ಞೆಯನ್ನು ಕುರಿತು ಸ್ವಾಮಿ ವಿವೇಕಾನಂದರು ಹೇಳುತ್ತಾರೆ: “ನಾವೇ ಎಲ್ಲಕ್ಕೂ ಹೊಣೆಗಾರರಾದಾಗ ಮಾತ್ರ ನಮಗೆ ಅತಿ ಶ್ರೇಷ್ಠವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ನಾನು ನಿಮ್ಮನ್ನೆಲ್ಲ ಕೇಳುತ್ತೇನೆ. ನಿಮ್ಮ ಕೈಗೆ ಒಂದು ಸಣ್ಣ ಮಗುವನ್ನು ಕೊಟ್ಟರೆ ನೀವು ಹೇಗೆ ವರ್ತಿಸುತ್ತೀರಿ? ತತ್ಕಾಲಕ್ಕೆ ನಿಮ್ಮ ಇಡೀ ಜೀವನ ಬದಲಾಯಿಸುವುದು.ನೀವು ಏನಾದರೂ ಆಗಿರಿ. ತಾತ್ಕಾಲಿಕ ವಾಗಿಯಾದರೂ ನೀವು ನಿಃಸ್ವಾರ್ಥಿಗಳಾಗಬೇಕು. ಜವಾಬ್ದಾರಿ ನಿಮ್ಮನ್ನು ಬದಲಾಯಿಸುವುದು. ನಾವೇ ಎಲ್ಲಕ್ಕೂ ಎಂದು ಹೊಣೆ ಗಾರರಾಗುವೆವೋ ಆಗ ನಮ್ಮ ಅತಿ ಶ್ರೇಷ್ಠ ಶೀಲ ವ್ಯಕ್ತವಾಗುವುದು ….ನನ್ನ ಅದೃಷ್ಟಕ್ಕೆ ನಾನು ಹೊಣೆ.”
ವೈಯಕ್ತಿಕ ಜವಾಬ್ದಾರಿ ಮತ್ತು ಸಾಮಾಜಿಕ ಜವಾಬ್ದಾರಿ ಎಂದು ನಾವು ವಿಭಾಗಿಸಬಹುದು. ವೈಯಕ್ತಿಕ ಜವಾಬ್ದಾರಿಯುಳ್ಳ ವನು ತನ್ನ ಸುಖದುಃಖಗಳಿಗೆಲ್ಲ ತಾನೇ ಹೊಣೆ ಎಂದು ಭಾವಿಸು ವನು, ತನ್ನ ಸ್ಥಿತಿಗಾಗಿ ಇತರರಾರನ್ನಾಗಲಿ, ಸಮಾಜವನ್ನಾಗಲಿ ಅಥವಾ ದೇವರನ್ನಾಗಲಿ ದೂರುವುದಿಲ್ಲ. ದೂಷಿಸುವುದೂ ಇಲ್ಲ; ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ, ಇತರರ ಮೇಲೆ ಹೊರಿಸು ವುದಿಲ್ಲ, ತನ್ನ ಹೊಣೆಯನ್ನು ಇತರರ ಮೇಲೆ ಹೇರುವುದಿಲ್ಲ ಮತ್ತು ಕರ್ತವ್ಯಗಳಿಂದ, ಜವಾಬ್ದಾರಿಯಿಂದ ನುಣುಚಿಕೊಳ್ಳುವು ದಿಲ್ಲ. ಅನೇಕರು ಶಕ್ತಿ ಸಾಮರ್ಥ್ಯಗಳಿದ್ದರೂ ವಿದ್ಯಾವಂತಾರಾಗಿ ದ್ದರೂ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸಲು ಇಷ್ಟಪಡುವು ದಿಲ್ಲ. ಇದು ಆಂತರಿಕ ಕೊರತೆಯ ಪರಿಣಾಮ. ಶಿಕ್ಷಣ ಈ ಕೊರತೆ ಯನ್ನು ನೀಗಿಸಬೇಕು. ಅದು ವ್ಯಕ್ತಿಯಲ್ಲಿ ಜವಾಬ್ದಾರಿಯ ಪ್ರಜ್ಞೆ ಯನ್ನು ಕೆರಳಿಸಬೇಕು. ವೈಯಕ್ತಿಕ ಜವಾಬ್ದಾರಿಯುಳ್ಳವನು ಸಾಮಾಜಿಕ ಜವಾಬ್ದಾರಿಯನ್ನೂ ಹೊಂದಿರುತ್ತಾನೆ. ಸಮಾಜಕ್ಕೆ ಹಾನಿಯಾದರೆ ತನಗೇ ಹಾನಿ ಎಂಬ ಅರಿವು ಅವನಿಗಿರುತ್ತದೆ, ಸಮಾಜವನ್ನು ಆರೋಗ್ಯವಂತವಾಗಿಡುವುದು ತನ್ನ ಜವಾಬ್ದಾರಿ ಎಂಬ ಅರಿವು ಅವನಲ್ಲಿ ಜಾಗೃತವಾಗಿರುತ್ತದೆ. ಅವನು ಸಮಾಜಕ್ಕೆ ಹಾನಿಯನ್ನು ಉಂಟು ಮಾಡದಿರುವುದು ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಾನೆ. ಇಂತಹ ಸಾಮಾಜಿಕ ಪ್ರಜ್ಞೆ, ಕಳಕಳಿ ಶಿಕ್ಷಣದಿಂದ ಉಂಟಾಗದಿದ್ದರೆ ಆ ಶಿಕ್ಷಣ ಹೆಸರಿಗೆ ತಕ್ಕನಾದುದಲ್ಲ. ಆದ್ದರಿಂದಲೇ ವಿವೇಕಾನಂದರು ಹೇಳುತ್ತಾರೆ: “ಎಲ್ಲಿಯವರೆಗೂ ಲಕ್ಷಾಂತರ ಜನರು ಅಜ್ಞಾನದಲ್ಲಿ ಇರುವರೊ, ಹಸಿವಿನಿಂದ ನರಳು ತಿರುವರೋ, ಅಲ್ಲಿಯವರೆಗೂ ಕಷ್ಟದಿಂದ ತಮ್ಮ ವಿದ್ಯಾಭ್ಯಾಸವನ್ನು ಪಡೆದೂ ಯಾರು ಅವರ ಅಂಥವರ ಕಡೆಗೆ ಸ್ವಲ್ಪವೂ ಗಮನ ಕೊಡದೆ ಇರುವರೋ ಅವರನ್ನು ವಿಶ್ವಾಸಘಾತಕರೆಂದು ಕರೆಯುತ್ತೇನೆ.


ಆದ್ದರಿಂದ ಸ್ವಾಮಿ ವಿವೇಕಾನಂದರ ಪ್ರಕಾರ ಶಿಕ್ಷಣವು ವ್ಯಕ್ತಿ ಯಲ್ಲಿ ಸೇವಾ ಮನೋಭಾವವನ್ನು ಬೆಳೆಸಬೇಕು. ಅವರ ಪ್ರಕಾರ ಇತರರ ಒಳಿತನ್ನು ಪರಿಗಣಿಸದೆ ಯಾರೂ ತಮ್ಮ ಒಳಿತನ್ನು ಸಾಧಿಸ ಲಾಗುವುದಿಲ್ಲ. ವ್ಯಕ್ತಿಗಳು ಒಟ್ಟು ಸಮಾಜವೆಂಬ ಶರೀರದ ಅವಿ ಭಾಜ್ಯ ಅಂಗಗಳು. ಒಂದು ದೇಹದಲ್ಲಿ ಯಾವುದೇ ಒಂದು ಅಂಗವು ಆರೋಗ್ಯವಂತವಾಗಿರಬೇಕಾದರೆ ಇಡೀ ದೇಹವೂ ಆರೋಗ್ಯವಂತ ವಾಗಿರಬೇಕು. ಒಟ್ಟು ಸಮಾಜವನ್ನು ಆರೋಗ್ಯವಂತವಾಗಿರಿಸುವ ಪ್ರಯತ್ನವೇ ಸೇವೆ. ಸಮಾಜ ಭ್ರಷ್ಟವಾದರೆ, ವಿಷಪೂರಿತವಾದರೆ ಎಲ್ಲರೂ ಅದರ ದುಷ್ಪರಿಣಾಮಕ್ಕೆ ಒಳಗಾಗಬೇಕಾಗುತ್ತದೆ. ಸ್ವಹಿತ ದೃಷ್ಟಿಯಿಂದಾದರೂ ಸಮಾಜವನ್ನು ಸುಸ್ಥಿತಿಯಲ್ಲಿಡಲು ನಾವು ಪ್ರಯತ್ನಿಸಬೇಕು.


ಸಮಾಜಸೇವೆಯೆಂದರೆ ಹೊಸದಾಗಿ ನಾವು ಏನನ್ನೂ ಮಾಡ ಬೇಕಾಗಿಲ್ಲ. ಆಸ್ಪತ್ರೆ, ಸ್ಕೂಲು, ಹಾಸ್ಟೆಲ್ ಮುಂತಾದವುಗಳನ್ನೂ ಪ್ರಾರಂಭಿಸಬೇಕಾಗಿಲ್ಲ. ನಮ್ಮ ಪಾಲಿಗೆ ಬಂದ ಕೆಲಸವನ್ನು ಕರ್ತವ್ಯ ನಿಷ್ಠೆಯಿಂದ, ಪರ ಹಿತಚಿಂತನೆಯಿಂದ ನೇರವೇರಿಸಿದರೆ ಅದೇ ದೊಡ್ಡ ಸೇವೆಯಾಗುತ್ತದೆ. ನಮ್ಮ ಪಕ್ಕದಲ್ಲಿರುವವನಿಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡುವುದು, ಸಕಾಲದಲ್ಲಿ ಸಹಾಯ ಮಾಡುವುದು ಇತ್ಯಾದಿಗಳೇ ದೊಡ್ಡ ಸೇವೆಯಾಗುತ್ತದೆ. ವಿವೇಕಾನಂದರು ಸ್ವಾರ್ಥ ಪರ ಜೀವನವನ್ನು ಅತ್ಯಂತ ಕಟುವಾಗಿ ಖಂಡಿಸುತ್ತಾರೆ: “ವಿಕಾಸವೇ ಜೀವನ, ಸಂಕೋಚವೇ ಮರಣ. ತನ್ನ ಸ್ವಂತ ಸುಖವನ್ನು ನೋಡಿ ಕೊಳ್ಳುತ್ತ ಯಾರು ಸ್ವಾರ್ಥಪರರಾಗಿ, ಸೋಮಾರಿಗಳಾಗಿ ಕಾಲ ಕಳೆ ಯುತ್ತಿರುವರೊ ಅವರಿಗೆ ನರಕದಲ್ಲಿಯೂ ಸ್ಥಳವಿಲ್ಲ.”


ನೀತಿಬದ್ಧ ನಡವಳಿಕೆಯ ಮೂಲಕವೂ ನಾವು ಸಮಾಜಕ್ಕೆ ಸೇವೆ ಸಲ್ಲಿಸಬೇಕು. ನಾವು ಒಂದು ಸುಳ್ಳು ಹೇಳುವುದು, ವಂಚಿಸು ವುದು, ಅಪ್ರಾಮಾಣಿಕತೆ ಇವೆಲ್ಲ ಸಮಾಜವೆಂಬ ಸರೋವರಕ್ಕೆ ವಿಷ ಬೆರೆಸಿದಂತೆ, ನೈತಿಕತೆಗೆ ನಾವು ಪ್ರಾಧಾನ್ಯ ನೀಡದಿದ್ದರೆ, ಅನೈತಿಕತೆಗೆ ಪ್ರೋತ್ಸಾಹವನ್ನು ನೀಡಿದರೆ ಕ್ರಮೇಣ ಸಮಾಜ ಭ್ರಷ್ಟ ವಾಗುತ್ತದೆ, ವಿಷಪೂರಿತವಾಗುತ್ತದೆ. ಯಾರೂ ಯಾರನ್ನೂ ನಂಬ ದಂತಹ ವಾತಾವರಣ ಸೃಷ್ಟಿಯಾಗುತ್ತದೆ. ಇದಕ್ಕಿಂತ ದುಃಖದ ಸ್ಥಿತಿ ಇನ್ನಾವುದಿದೆ? ನಾವೂ ನೀತಿವಂತರಾಗಿದ್ದು ಇತರರೂ ನೀತಿವಂತ ಜೀವನ ನಡೆಸಲು ನಾವು ಸಹಾಯ ಮಾಡಬೇಕು. ಇದಿಲ್ಲದಿದ್ದರೆ ನಾವು ಮಾಡಿದ ಎಲ್ಲ ಸೇವೆಯೂ ನೀರಿನಲ್ಲಿ ಹೋಮ ಮಾಡಿದಂತಾ ಗುತ್ತದೆ. ವಿವೇಕಾನಂದರು ಹೇಳುತ್ತಾರೆ: “ನೀವು ಎಲ್ಲ ಮನೆ ಗಳನ್ನೂ ದಾನಗೃಹಗಳಾಗಿ ಪರಿವರ್ತಿಸಬಹುದು, ಭೂಮಿಯನ್ನೆಲ್ಲ ಆಸ್ಪತ್ರೆಗಳಿಂದ ತುಂಬಿಸಬಹುದು. ಆದರೆ ಜನರ ಚಾರಿತ್ರ್ಯ ಬದಲಾಗದವರೆಗೂ ಜನರ ದುಃಖನಿವಾರಣೆ ಆಗಲಾರದು. ಒಳಿತಿನ ಶಕ್ತಿಯಲ್ಲಿ ಜನಸಾಮಾನ್ಯರಿಗೆ ನಂಬಿಕೆ ಹುಟ್ಟಿಸುವುದು ನಾವು ಮಾಡ ಬೇಕಾಗಿರುವ ದೊಡ್ಡ ಸೇವೆ. ನಮಗೆಲ್ಲರಿಗೂ ಒಳಿತಿನ ಶಕ್ತಿಯಲ್ಲಿ ಶ್ರದ್ಧೆ ಇರಬೇಕೆಂದು ವಿವೇಕಾನಂದರು ಒತ್ತಿ ಹೇಳುತ್ತಾರೆ.


ವಿದ್ಯಾರ್ಥಿಗಳಲ್ಲಿ ಸ್ವದೇಶಾಭಿಮಾನವನ್ನು ಜಾಗೃತಗೊಳಿಸುವ ಶಿಕ್ಷಣ ನಮಗೆ ಬೇಕೆಂದು ವಿವೇಕಾನಂದರು ಕಳಕಳಿಯಿಂದ ಹೇಳು ತ್ತಾರೆ. “ನಿಮಗೆ ಈಗ ದೊರೆಯುತ್ತಿರುವ ಶಿಕ್ಷಣದಲ್ಲಿ ಕೆಲವು ಒಳ್ಳೆಯ ಅಂಶಗಳಿವೆ. ಆದರೆ ಅದರಲ್ಲಿ ಒಂದು ಮಹಾಲೋಪವಿದೆ, ಅದು ಒಳ್ಳೆಯ ಅಂಶಗಳನ್ನೂ ನಿಷ್ಕ್ರಿಯಗೊಳಿಸಿದೆ. ಇದು ಪುರುಷ ಸಿಂಹರನ್ನು ತಯಾರುಮಾಡುವ ವಿದ್ಯಾಭ್ಯಾಸವಲ್ಲ. ಇದು ಕೇವಲ ನಿಷೇಧಮಯ ವಿದ್ಯಾಭ್ಯಾಸ, ನಿಷೇಧ ಭಾವನೆಯ ಮೇಲೆ ನಿಂತ ಯಾವುದೇ ತರಬೇತಿಯಾಗಲಿ ಮೃತ್ಯುವಿಗಿಂತ ಹಾನಿಕರ. ಮಗು ವನ್ನು ಶಾಲೆಗೆ ಕಳಿಸುವರು. ಮೊದಲು ಅದು ಕಲಿಯುವುದೇ ತಂದೆ ಮೂರ್ಖ ಎಂಬುದನ್ನು, ಎರಡನೆಯದು ಅವರ ತಾತ ಹುಚ್ಚನನ್ನು ವುದನ್ನು, ಮೂರನೆಯದೇ ಗುರುಗಳೆಲ್ಲ ಆಷಾಢಭೂತಿಗಳು, ನಾಲ್ಕನೆ ಯದೇ ಪವಿತ್ರ ಶಾಸ್ತ್ರಗಳೆಲ್ಲ ಸುಳ್ಳಿನ ಕಂತೆ ಎನ್ನುವುದನ್ನು, ಅವನಿಗೆ ಹದಿನಾರು ವರುಷ ತುಂಬುವ ಸಮಯಕ್ಕೆ ಅವನೊಂದು ನಿಷೇಧಮಯ ಕಂತೆಯಾಗಿರುತ್ತಾನೆ.”


ಸ್ವಾಮಿ ವಿವೇಕಾನಂದರ ಪ್ರಕಾರ ಯಾರಿಗೆ ಸ್ವಾಭಿಮಾನವಿರುವು ದಿಲ್ಲವೊ ತಮ್ಮ ದೇಶ ಸಂಸ್ಕೃತಿಗಳ ಬಗ್ಗೆ ಅಭಿಮಾನವಿರುವುದಿ ಲ್ಲವೊ ಅವರು ಬೇಗ ನೈತಿಕ ಅಧಃಪತನ ಹೊಂದುತ್ತಾರೆ. ಇಂದಿನ ಅನೈತಿಕತೆ ಭ್ರಷ್ಟಾಚಾರಗಳಿಗೆಲ್ಲ ನಮ್ಮಲ್ಲಿ ದೇಶಾಭಿಮಾನ ಇಲ್ಲದಿ ರುವುದೇ ಕಾರಣ ಎಂದು ಹೇಳಬಹುದು. ನಮ್ಮ ದೇಶವನ್ನು ಪ್ರೀತಿಸುವುದೆಂದರೆ ನಮ್ಮ ಜನರನ್ನೂ ಸಂಸ್ಕೃತಿಯನ್ನೂ ಧರ್ಮ ವನ್ನೂ ಪ್ರೀತಿಸುವುದು. ಇಂದಿನ ಕೋಮು ಗಲಭೆ, ಹಿಂಸಾಚಾರ, ಭ್ರಷ್ಟಾಚಾರ ಇತ್ಯಾದಿಗಳಿಂದ ನಾವು ನಮ್ಮವರ ಬಗ್ಗೆ ಎಷ್ಟೊಂದು ನಿರ್ದಯಿಗಳು, ಕ್ರೂರಿಗಳು ಎಂಬುದು ಸ್ಪಷ್ಟವಾಗುತ್ತದೆ. ಪಾಶ್ಚಾತ್ಯ ರೀತಿನೀತಿಗಳನ್ನೂ ಅಲ್ಲಿಯ ಸಂಗೀತ ನೃತ್ಯ ಕಲೆ ಮುಂತಾದವು ಗಳನ್ನೂ ಅನುಕರಿಸುವ ಮನೋಭಾವ ನಮ್ಮಲ್ಲಿ ನಮಗೆ ಇರುವ ಕೀಳರಿಮೆಯನ್ನು ಸೂಚಿಸುತ್ತದೆ. ಮತ್ತೆ ಕೀಳರಿಮೆಯೇ ನಮ್ಮ ನೈತಿಕ ಅಧಃಪತನಕ್ಕೆ ಮೂಲ ಕಾರಣ. ಇದರಿಂದ ಧಾರ್ಮಿಕ ಶ್ರದ್ಧೆ ಹೊರಟುಹೋಗುತ್ತದೆ. ಅಂತರಿಕ ದುರ್ಬಲತೆಯಿಂದಾಗಿ ಎಲ್ಲ ಪ್ರಭಾವಗಳಿಗೂ ವ್ಯಕ್ತಿ ತನ್ನನ್ನು ತೆರೆದುಕೊಳ್ಳುತ್ತ ಯಾವ ನೆಲೆಯೂ ಇಲ್ಲದೆ ವ್ಯಕ್ತಿತ್ವ ನುಚ್ಚುನೂರಾಗುತ್ತದೆ. ಅನುಕರಣೆ ಎಂಬುದು ಅತ್ಯಂತ ಅವನತಿಯ ಚಿಹ್ನೆ ಎಂದು ಸ್ವಾಮಿ ವಿವೇಕಾನಂದರು ಅಭಿಪ್ರಾಯಪಡುತ್ತಾರೆ. ನಾವು ಇತರರಿಂದ ಕಲಿಯುವುದು ಬೇಕಾ ದಷ್ಟು ಇದೆ, ಇತರರಿಂದ ಕಲಿಯಲು ಒಲ್ಲದವನು ಸತ್ತಂತೆಯೇ ಆದರೆ ನಾವು ನಮ್ಮದೇ ರೀತಿಯಲ್ಲಿ ಇತರರಿಂದ ಕಲಿಯಬೇಕು, ನಾವು ಇತರರಾಗಬಾರದು ಇದು ವಿವೇಕಾನಂದರ ಮತ. ಅವರು ಇದಕ್ಕೆ ಬೀಜದ ಉದಾಹರಣೆಯನ್ನು ಕೊಡುತ್ತಾರೆ. ಒಂದು ಬೀಜ ಗಾಳಿ, ನೀರು, ಬೆಳಕು, ಗೊಬ್ಬರ ಎಲ್ಲವನ್ನೂ ಸ್ವೀಕರಿಸುತ್ತದೆ. ಆದರೆ ಅದು ಗಾಳಿ, ನೀರು ಬೆಳಕು, ಗೊಬ್ಬರ ಯಾವುದೂ ಆಗದೆ ತನ್ನದೇ ಬೆಳವಣಿಗೆಯ ನಿಯಮಕ್ಕೆ ಅನುಸಾರವಾಗಿ ಬೆಳೆದು ಮರವಾಗು


ಒಂದು ನಿರ್ದಿಷ್ಟ ಸಾಂಸ್ಕೃತಿಕ ಹಿನ್ನೆಲೆ ಇಲ್ಲದಿದ್ದರೆ ಯಾವುದೇ ಜನಾಂಗವೂ ತನ್ನತನವನ್ನು ಉಳಿಸಿಕೊಳ್ಳಲಾರದು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: “ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿಗೆ ಜ್ಞಾನರಾಶಿಯನ್ನೇ ಕೊಡಬಹುದು. ಆದರೆ ಅದೆ ರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯು ರಕ್ತದಲ್ಲಿ ಹರಿಯ ಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಅದರಿಂದ ಏನು ಪ್ರಯೋಜನ? ಅವರು ವ್ಯಾಘ್ರಗಳಂತೆ, ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ. ನಾಗರಿಕತೆಯಂತೆ ಅವರ ಜ್ಞಾನ ಕೂಡ ತೋರಿಕೆಗೆ ಮಾತ್ರ ಅವರನ್ನು ಸ್ವಲ್ಪ ಕೆರೆದರೆ ಸಾಕು ಕಾಡುಮನುಷ್ಯ ಕಾಣು ತಾನೆ.” “ಪವಿತ್ರತೆ ಇಲ್ಲದೆ ಅತಿಯಾದ ಜ್ಞಾನ ಮತ್ತು ಅಧಿಕಾರಗಳು ಮನುಷ್ಯರನ್ನು ರಾಕ್ಷಸರನ್ನಾಗಿ ಮಾಡುತ್ತವೆ” ಎಂದು ಅವರು ಇನ್ನೊಂದು ಸಂದರ್ಭದಲ್ಲಿ ಹೇಳುತ್ತಾರೆ.


ಸ್ವಾಮಿ ವಿವೇಕಾನಂದರ ಶಿಕ್ಷಣಚಿಂತನೆಯಲ್ಲಿ ಬ್ರಹ್ಮಚರ್ಯ ಪ್ರಧಾನ ಸ್ಥಾನವನ್ನು ಪಡೆಯುತ್ತದೆ. ಹಿಂದೂ ಸಂಪ್ರದಾಯದಲ್ಲಿ ವಿದ್ಯಾರ್ಥಿ ದೆಸೆಯನ್ನು ಬ್ರಹ್ಮಚರ್ಯಾಶ್ರಮ ಎಂದು ಕರೆಯ ಲಾಗಿದೆ. ಈ ಆಶ್ರಮದಲ್ಲಿರುವ ವಿದ್ಯಾರ್ಥಿಯು ಲೈಂಗಿಕ ಪ್ರವೃತ್ತಿ ಯನ್ನು ನಿಗ್ರಹಿಸಬೇಕು. ಇದರಿಂದ ಶಕ್ತಿ ಸಂಚಯವಾಗುತ್ತದೆ. ಈ ಶಕ್ತಿಯು ಓಜಸ್ಸಾಗಿ ಪರಿವರ್ತಿಸಿ ಮೇಧಾನಾಡಿಯೆಂಬ ತೀಕ್ಷ್ಮ ಗ್ರಹಣ ಶಕ್ತಿಯು ಜಾಗೃತವಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳು ತ್ತಾರೆ: “ಲೈಂಗಿಕ ಶಕ್ತಿಯಾಗಿ ವ್ಯಕ್ತವಾಗುವ ಮಾನವ ಶಕ್ತಿಯನ್ನು ನಿಗ್ರಹಿಸಿದಾಗ ಅದು ಸುಲಭವಾಗಿ ಓಜಸ್ಸಾಗಿ ಪರಿವರ್ತಿಸುವುದು. ಪವಿತ್ರ ಜೀವನವನ್ನು ನಡೆಸುವ ಪುರುಷ ಮತ್ತು ಸ್ತ್ರೀಯರು ಮಾತ್ರ ಓಜಸ್ಸನ್ನು ಪಡೆಯುತ್ತಾರೆ. ಅದನ್ನು ಮಿದುಳಿನಲ್ಲಿ ಶೇಖರಿಸುತ್ತಾರೆ. ಆದ್ದರಿಂದಲೇ ಬ್ರಹ್ಮಚರ್ಯವನ್ನು ಶ್ರೇಷ್ಠ ಗುಣವಾಗಿ ಪರಿಗಣಿಸಲಾಗಿದೆ.”


ಆಧುನಿಕ ವೈದ್ಯರೂ ಕೂಡ ಬ್ರಹ್ಮಚರ್ಯ ಪಾಲನೆಗೆ ಒತ್ತು ನೀಡುತ್ತಾರೆ. ಸ್ವಾಮಿ ಯತೀಶ್ವರಾನಂದರು ಶಿಕ್ಷಣದ ಬಗ್ಗೆ ತಮ್ಮ ಲೇಖನದಲ್ಲಿ ಪಾಶ್ಚಾತ್ಯ ವೈದ್ಯರೊಬ್ಬರ ಅಭಿಪ್ರಾಯವನ್ನು ಉದ್ಧರಿ ಸುತ್ತಾರೆ: “ಗಂಡುಹೆಣ್ಣುಗಳಿಬ್ಬರ ರಕ್ತದ ಅತ್ಯುತ್ತಮ ಭಾಗವು ಸಂತಾನೋತ್ಪತ್ತಿಯ ಅಂಶವಾಗಿ ರೂಪಾಂತರಗೊಳ್ಳುತ್ತದೆ. ಎಂಬುದು ವೈದ್ಯಕೀಯ ಶರೀರಶಾಸ್ತ್ರದ ಒಂದು ಸತ್ಯ ಸಂಗತಿ. ಪವಿತ್ರ ಮತ್ತು ಶಿಸ್ತಿನ ಜೀವನ ನಡೆಸುವವರಲ್ಲಿ ಈ ಅಂಶವು ಹೀರಿ ಕೊಳ್ಳಲ್ಪಡುತ್ತದೆ. ಅದು ಪುನಃ ರಕ್ತಪರಿಚಲನೆಯೊಡನೆ ಒಂದಾಗಿ ಮಿದುಳು, ನರ ಮತ್ತು ಮಾಂಸಖಂಡಗಳ ಅತಿಸೂಕ್ಷ್ಮ ಭಾಗಗಳಾಗಿ ಪರಿಣಮಿಸುತ್ತದೆ. ಮನುಷ್ಯನ ಈ ಜೀವನಾಂಶವು ಅವನ ಪೂರ್ಣ ವ್ಯವಸ್ಥೆಯೊಡನೆ ಹರಡಿಕೊಂಡು ಅವನನ್ನು ಪೌರುಷವಂತನನ್ನಾ ಗಿಯೂ ಶಕ್ತಿಶಾಲಿಯಾಗಿಯೂ ಧೈರ್ಯಶಾಲಿಯಾಗಿಯೂ ಮತ್ತು ಸಾಹಸಿಯನ್ನಾಗಿಯೂ ಮಾಡುತ್ತದೆ. ಅದನ್ನು ವ್ಯರ್ಥವಾಗುವಂತೆ ಮಾಡಿದರೆ ವ್ಯಕ್ತಿಯು ಹೆಣ್ಣಿಗನೂ, ದುರ್ಬಲನೂ, ಅನಿರ್ಧಾರಿತನೂ ಆಗುತ್ತಾನೆ ಬೌದ್ಧಿಕವಾಗಿ ಮತ್ತು ಭೌತಿಕವಾಗಿ ಕ್ಷೀಣಿಸುತ್ತಾನೆ…. ನಿಗ್ರಹಪೂರ್ಣವಾಗಿ ಸಂತಾನೋತ್ಪತ್ತಿಯ ಅಂಗಗಳನ್ನು ಉಪ ಯೋಗಿಸುವುದರಿಂದ ದೈಹಿಕ ಹುರುಪು ಜಾಸ್ತಿಯಾಗುತ್ತದೆ ಮತ್ತು ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.


ಸ್ವಾಮಿ ವಿವೇಕಾನಂದರು ಹೇಳುವಂತೆ ಬ್ರಹ್ಮಚರ್ಯ ಪಾಲನೆಯು ವ್ಯಕ್ತಿಯನ್ನು ಶ್ರದ್ಧಾವಂತನನ್ನಾಗಿ ಮಾಡುತ್ತದೆ. ಅವರು ಶ್ರದ್ದೆಗೆ ಹೆಚ್ಚು ಒತ್ತನ್ನು ನೀಡುತ್ತಿದ್ದರು. ಶಿಕ್ಷಣವು ವಿದ್ಯಾರ್ಥಿಗೆ ಅಪಾರ ಆತ್ಮಶ್ರದ್ಧೆಯನ್ನು ನೀಡಬೇಕು. ಆತ್ಮ ಶ್ರದ್ಧೆಯೆಂದರೆ ತನ್ನಲ್ಲಿ ಅಪಾರ ಶಕ್ತಿಯಿದೆ, ತಾನೇನ್ನಾದರೂ ಸಾಧಿಸಬಲ್ಲೆ ಎಂಬ ಆತ ವಿಶ್ವಾಸ, ವಿವೇಕಾನಂದರು ಹೇಳುತ್ತಾರೆ: “ಮಾನವ ಇತಿಹಾಸದಲ್ಲೆಲ್ಲ ಪ್ರಖ್ಯಾತರಾದ ಸ್ತ್ರೀಪುರುಷರ ಜೀವನದಲ್ಲಿ, ಎಲ್ಲ ಕ್ರಿಯೋತ್ತೇಜಕ ಶಕ್ತಿಗಿಂತಲೂ ಯಾವುದಾದರೊಂದು ಅತಿ ಪ್ರಾಮುಖ್ಯವಾಗಿದ್ದರೆ, ಅದು ಅವರ ಶಕ್ತಿಯಲ್ಲಿ ಅವರಿಗೆ ಇರುವ ಶ್ರದ್ಧೆ. ತಾವು ಪ್ರಖ್ಯಾತ ರಾಗಬೇಕೆಂಬ ಬಯಕೆಯಿಂದ ಜನ್ಮತಾಳಿ ಅವರು ಪ್ರಖ್ಯಾತರಾದರು.”


ಒಂದು ವಸ್ತುವಿನಲ್ಲಿ ನಮಗೆ ವಿಶ್ವಾಸವಿದ್ದರೆ ಅದನ್ನು ಸರಿ ಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ, ಅದು ಹಾಳಾಗದಂತೆ ನೋಡಿಕೊಳ್ಳುತ್ತೇವೆ. ಒಂದು ವಸ್ತುವಿನಲ್ಲಿ ವಿಶ್ವಾಸವೆಂದರೆ ಅದರ ಉಪಯುಕ್ತತೆಯಲ್ಲಿ ನಮಗಿರುವ ವಿಶ್ವಾಸ. ಅದರ ಉಪಯುಕ್ತತೆ ಹಿರಿದಾದಷ್ಟೂ ಅದರಲ್ಲಿ ಹೆಚ್ಚು ವಿಶ್ವಾಸ ನಮಗಿರುತ್ತದೆ. ಎಲ್ಲ ವಸ್ತುಗಳಿಗಿಂತಲೂ ಜ್ಞಾನ ಅತ್ಯಂತ ಹಿರಿದಾದದ್ದು. ಆಹಾರ ಪದಾರ್ಥ ಕ್ಕಿಂತಲೂ ಆಹಾರವನ್ನು ಉತ್ಪಾದಿಸಲು ಬೇಕಾಗುವ ಜ್ಞಾನ ತುಂಬ ಹಿರಿದಾದುದು. ಹಣಕ್ಕಿಂತಲೂ ಹಣ ಮಾಡುವ ಕೌಶಲ ಹೆಚ್ಚು ಹಿರಿದಾದುದು. ಈ ಜ್ಞಾನ ಮತ್ತು ಕೌಶಲಗಳನ್ನು ಹೊಂದಿರುವ ವನು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಬಳಸುವವನು, ಅಂದರೆ ಮಾನವ, ಎಲ್ಲಕ್ಕಿಂತಲೂ ಹಿರಿದಾಗಿರಬೇಕು. ಹೀಗೆ ವ್ಯಕ್ತಿಯು ತನ್ನ ಮೌಲ್ಯದಲ್ಲಿ, ತನ್ನ ಶಕ್ತಿಯಲ್ಲಿ ವಿಶ್ವಾಸವಿಡ ಬೇಕು. ಅಂತಹ ಆತ್ಮವಿಶ್ವಾಸ ತನ್ನನ್ನು ತಾನು ಸರಿಯಾಗಿ ಕಾಪಾಡಿ ಕೊಳ್ಳಲು, ತನ್ನನ್ನು ತಾನು ಸರಿಯಾಗಿ ಉಪಯೋಗಿಸಿಕೊಳ್ಳಲು ಅವನಿಗೆ ಸಹಾಯಕವಾಗುತ್ತದೆ. ಅನೇಕರು ಎಲ್ಲವನ್ನೂ ಚೆನ್ನಾಗಿ ಬಳಸಿಕೊಂಡು ತಮ್ಮನ್ನು ಮಾತ್ರ ಹಾಳುಮಾಡಿಕೊಳ್ಳುತ್ತಾರೆ. ಎಲ್ಲ ವನ್ನೂ ಉಪಯೋಗಿಸಿಕೊಂಡು ತಾವು ಮಾತ್ರ ಅನುಪಯುಕ್ತ ಮಾತ್ರವಲ್ಲ ದುರುಪಯುಕ್ತ ಜೀವನ ನಡೆಸುತ್ತಾರೆ. ಒಬ್ಬ ವ್ಯಕ್ತಿಗೆ ತನ್ನ ನಿಜವಾದ ಮೌಲ್ಯದಲ್ಲಿ ವಿಶ್ವಾಸವಿದ್ದರೆ ಅವನು ಇಂತಹ ಜೀವನ ನಡೆಸುವುದೇ ಇಲ್ಲ.


ಅಬ್ರಹಾಂ ಲಿಂಕನ್‌ರ ಸ್ನೇಹಿತರೊಬ್ಬರು ಅವರನ್ನು, “ಯಾಕೆ ಅಷ್ಟೊಂದು ಓದುತ್ತೀರಿ ನೀವು? ಶಿಕ್ಷಣವು ನಿಮ್ಮ ಜೀವನೋಪಾಯಕ್ಕೆ ಯಾವುದೇ ರೀತಿಯಲ್ಲಿಯೂ ಸಹಾಯವಾಗುತ್ತಿಲ್ಲ.
“ನಾನು ಜೀವನೋಪಾಯಕ್ಕಾಗಿ ಓದುತ್ತಿಲ್ಲ, ನಾನು ಪಡೆಯುವ ಜೀವನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಕ್ಕಾಗಿ ಓದುತ್ತಿ ದೇನೆ,” ಎಂದು ಲಿಂಕನ್ ತಕ್ಷಣ ಉತ್ತರಿಸಿದರು.


ತನ್ನ ಅಂತರಂಗದ ಒಳ್ಳೆಯತನದಲ್ಲಿ, ಶಕ್ತಿ ಸಾಮರ್ಥ್ಯಗಳಲ್ಲಿ, ಪಾವಿತ್ರ್ಯದಲ್ಲಿ ಮತ್ತು ದಿವ್ಯತೆಯಲ್ಲಿ ವಿಶ್ವಾಸವುಳ್ಳವನು ಅದಕ್ಕನು ಗುಣವಾಗಿಯೇ ತನ್ನ ಜೀವನವನ್ನು ರೂಪಿಸಿಕೊಳ್ಳುತ್ತಾನೆ, ಎಂದೂ ಕೆಟ್ಟ ಹಾದಿ ಹಿಡಿಯುವುದಿಲ್ಲ. ಆದ್ದರಿಂದಲೇ ವಿವೇಕಾನಂದರು ಹೇಳುತ್ತಾರೆ: “ಆತ್ಮಶ್ರದ್ಧೆಯ ಆದರ್ಶ ನಮಗೆ ಬಹಳ ಸಹಕಾರಿ. ನಮ್ಮಲ್ಲಿ ನಮಗೆ ನಂಬಿಕೆಯನ್ನು ಹೆಚ್ಚು ಬೋಧಿಸಿದ್ದರೆ, ಅದನ್ನು ಅನುಷ್ಠಾನಕ್ಕೆ ತಂದಿದ್ದರೆ, ನಮ್ಮಲ್ಲಿರುವ ಅನೇಕ ದೋಷಗಳು ಮತ್ತು ದುಃಖದ ಬಹುಭಾಗ ಮಾಯಾವಾಗುತ್ತಿದ್ದವು ಎಂಬುದರಲ್ಲಿ ಸಂದೇಹ ವಿಲ್ಲ.”

ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣದ ಮುಖ್ಯಾಂಶಗಳು:

೧. ಶಿಕ್ಷಣವೆಂದರೆ ನಮ್ಮೊಳಗಿರುವ ಸಾಧ್ಯತೆಗಳ ಅನಾವರಣ,

೨. ಶಿಕ್ಷಣವೆಂದರೆ ಕೇವಲ ವಿಷಯಸಂಗ್ರಹವಲ್ಲ.

೩. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಶಿಕ್ಷಣದ ಗುರಿ,

೪. ಶಿಕ್ಷಣವು ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು.

೫. ಶೀಲನಿರ್ಮಾಣವೇ ಶಿಕ್ಷಣದ ಮೂಲಭೂತ ಧೈಯ

೬. ಶಿಕ್ಷಣವು ವ್ಯಕ್ತಿಯನ್ನು ಜವಾಬ್ದಾರಿಯುತನನ್ನಾಗಿ ಮಾಡ ಬೇಕು.
೭. ಶಿಕ್ಷಣವು ವ್ಯಕ್ತಿಯಲ್ಲಿ ಸೇವಾಮನೋಭಾವವನ್ನು ಬೆಳೆಸಬೇಕು.
೮. ಶಿಕ್ಷಣವು ವ್ಯಕ್ತಿಯಲ್ಲಿ ಸ್ವದೇಶಾಭಿಮಾನವನ್ನು ಜಾಗೃತ ಗೊಳಿಸಬೇಕು.
೯. ಶಿಕ್ಷಣದಿಂದ ಸಂಸ್ಕೃತಿ ಬರಬೇಕು.
೧೦. ಶಿಕ್ಷಣವು ಆತ್ಮಶ್ರದ್ಧೆಯನ್ನು ಕೆರಳಿಸಬೇಕು.

೧೧. ಧರ್ಮವೇ ಶಿಕ್ಷಣದ ಕೇಂದ್ರಬಿಂದು.


“ಆದರ್ಶವಿರುವ ಮನುಷ್ಯ ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶ ಇಲ್ಲದವನು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದಕಾರಣ ಒಂದು ಆದರ್ಶವಿರುವುದು ಮೇಲು. ಈ ಆದರ್ಶ ನಮ್ಮ ಹೃದ್ಗತವಾಗಿ ನಮ್ಮ ರಕ್ತನಾಳಗಳಲ್ಲೆಲ್ಲ ಸಂಚರಿಸಿ ಪ್ರತಿ ಯೊಂದು ರಕ್ತಕಣವೂ ಈ ಭಾವನೆಯಿಂದ ಅನುರಣಿತವಾಗಿ ನಮ್ಮ ದೇಹದ ಅಂಗೋಪಾಂಗಗಳಲ್ಲೆಲ್ಲ ಸಂಚರಿಸುವ ತನಕ ಅದನ್ನು ನಾವು ಕೇಳಬೇಕು. ನಾವು ಅದನ್ನು ಕುರಿತು ಧ್ಯಾನಿಸಬೇಕು. ‘ಹೃದಯ ತುಂಬಿ ತುಳುಕಾಡಿದಾಗ ಮಾತು ಹೊಮ್ಮುತ್ತದೆ,’ ಕೈಗಳೂ ಕೆಲಸ ಮಾಡುತ್ತವೆ,” ಎಂದು ಹೇಳು ತಾರೆ ಸ್ವಾಮಿ ವಿವೇಕಾನಂದರು.


ನಾವು ಮಕ್ಕಳಿಗೆ ಆದರ್ಶದ ಕುರಿತು ಬಹಳಷ್ಟು ಹೇಳುತ್ತವೆ, ಪುರಾಣೇತಿಹಾಸದ ಆದರ್ಶ ವ್ಯಕ್ತಿಗಳ ಜೀವನ ಘಟನೆಗಳನ್ನೂ ಉಪದೇಶಗಳನ್ನೂ ಅವರಿಗೆ ಮತ್ತೆ ಮತ್ತೆ ತಿಳಿಸುತ್ತೇವೆ. ಆದರೆ ಇವೆಲ್ಲ ಗತಕಾಲದ, ದೂರದ ಸಂಗತಿಗಳು, ಮಕ್ಕಳಿಗೆ ಬೇಕಾಗಿರು ವುದು ಜೀವಂತ ಉದಾಹರಣೆಗಳು. ಅದಿಲ್ಲದಿದ್ದರೆ ಅವರಲ್ಲಿ ದೃಢ ನಂಬಿಕೆ ಉಂಟಾಗುವುದಿಲ್ಲ. ತಮ್ಮ ಸುತ್ತಲೂ ಸುಳ್ಳು ಹೇಳುವವ ರನ್ನೇ ನೋಡುತ್ತಿರುವಾಗ, ಸತ್ಯ ಹರಿಶ್ಚಂದ್ರನ ಕತೆ ಮಕ್ಕಳಲ್ಲಿ ಸತ್ಯ ಸಂಧತೆಯ ಆದರ್ಶಕ್ಕೆ ಸ್ಫೂರ್ತಿಯನ್ನೀಯಲಾರದು. ಮಕ್ಕಳ ಮೇಲೆ ನೇರವಾಗಿ ಪ್ರಭಾವವನ್ನು ಬೀರುವ ವ್ಯಕ್ತಿಗಳು ಆದರ್ಶ ವ್ಯಕ್ತಿ ಗಳಾಗಿರದಿದ್ದರೆ ಅವರು ಮುಂದೆ ಆದರ್ಶ ವ್ಯಕ್ತಿಗಳಾಗುವ ಸಂಭವ ಅತ್ಯಂತ ಕಡಿಮೆ. ಅವರ ಮೇಲೆ ಅತ್ಯಂತ ನಿಕಟವಾಗಿ ಪ್ರಭಾವ ಬೀರುವವರು ಮೊದಲು ತಂದೆ-ತಾಯಿಗಳು, ಅನಂತರ ಉಪಾಧ್ಯಾ ಯರು, ತಂದೆ-ತಾಯಿಗಳ ಪ್ರೀತಿಯ ವಲಯದಲ್ಲಿ ಬೆಳೆಯುವ ಮಕ್ಕಳು, ಅವರ ನಡೆ ನುಡಿ ಆದರ್ಶಗಳಿಂದ ಪ್ರಭಾವಿತರಾಗು ವುದು ಸ್ವಾಭಾವಿಕ. ಹಾಗೆಯೇ ಉಪಾಧ್ಯಾಯರು ಪಾಠ ಹೇಳುವಾಗ ಕೇವಲ ಪಠ್ಯ ವಿಷಯಗಳನ್ನು ಕಲಿಸುವುದಲ್ಲದೆ ತಮ್ಮ ಜೀವನ ವಿಧಾನವನ್ನೂ ಮಕ್ಕಳಿಗೆ ತಮಗೇ ಅರಿವಿಲ್ಲದೆ ಕಲಿಸುತ್ತಿರು ತ್ತಾರೆ.

ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಜಾಸ್ತಿ. ಅವರು ಉಪಾಧ್ಯಾಯರ ಹಾವಭಾವಗಳನ್ನೂ ಮಾತನಾಡುವ ಶೈಲಿಯನ್ನೂ ಗಮನವಿಟ್ಟು ನೋಡುತ್ತಿರುತ್ತಾರೆ, ಮತ್ತು ಅವುಗಳಿಗೆ ಅನುಗುಣವಾಗಿ ಉಪಾಧ್ಯಾಯರಿಗೆ ಅಡ್ಡ ಹೆಸರನ್ನಿಡುವುದು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ರೂಢಿ. ಈ ರೀತಿ ಅಡ್ಡ ಹೆಸರನ್ನಿಡುವು ದರಲ್ಲಿ ಒಂದು ವೈಶಿಷ್ಟ್ಯವಿದೆ. ಇದು ವಿದ್ಯಾರ್ಥಿಗಳು ಉಪಾಧ್ಯಾ ಯರ ನಡೆ-ನುಡಿಗಳನ್ನು ಗಮನವಿಟ್ಟು ಪರೀಶೀಲಿಸುತ್ತಿರುತ್ತಾರೆ ಎಂಬುದನ್ನು ಸೂಚಿಸುತ್ತದೆ. ಇದು ಉಪಾಧ್ಯಾಯರು ವಿದ್ಯಾರ್ಥಿಗಳ ಮುಂದೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಎಚ್ಚರಿಕೆ ನೀಡು ಇದೆ. ಅವರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಾಗು ತದೆ. ಅತ್ಯಂತ ಚೆನ್ನಾಗಿ, ಪರಿಣಾಮಕಾರಿಯಾಗಿ ಪಾಠ ಮಾಡುವ ಉಪಾಧ್ಯಾಯರು ಸ್ವಾಭಾವಿಕವಾಗಿಯೇ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ. ಅಂಥ ಉಪಾಧ್ಯಾಯರ ಚಾರಿತ್ರ್ಯ ಸರಿಯಿಲ್ಲ ದಿದ್ದರೆ ವಿದ್ಯಾರ್ಥಿಗಳೂ ಅವರನ್ನು ಅನುಸರಿಸಿ ದಾರಿತಪ್ಪುವ ಸಾಧ್ಯತೆ ಅಧಿಕ.


“ಮೌಲ್ಯಗಳನ್ನು ಬೋಧಿಸುವುದಲ್ಲ, ಅವುಗಳನ್ನು ಗ್ರಹಿಸಬೇಕು (Values are not taught, but they are caught) ow ಆಂಗ್ಲ ಉಕ್ತಿ ಇದೆ. ಇದಕ್ಕೆ ಸಂಬಂಧಪಟ್ಟಂತೆ ಶ್ರೀರಾಮಕೃಷ್ಣರು ಒಂದು ಕಥೆಯನ್ನು ಹೇಳುತ್ತಿದ್ದರು: ಒಬ್ಬ ವೈದ್ಯನ ಹತ್ತಿರ ರೋಗಿ ಯಾದ ಹುಡುಗನನ್ನು ಕರೆದುಕೊಂಡು ತಂದೆಯು ಬರುತ್ತಾನೆ. ವೈದ್ಯನು ರೋಗ ತಪಾಸಣೆ ಮಾಡಿ ಒಂದು ವಾರದ ನಂತರ ಹುಡುಗ ನನ್ನು ಮತ್ತೆ ಕರೆದುಕೊಂಡು ಬರಲು ಹೇಳುತ್ತಾನೆ. ಒಂದು ವಾರದ ನಂತರ ಬಂದಾಗ “ನೀನು ಬೆಲ್ಲ ತಿನ್ನಬಾರದು” ಎಂದು ವೈದ್ಯನು ಹುಡುಗನಿಗೆ ಹೇಳುತ್ತಾನೆ. ಇದನ್ನು ಹಿಂದಿನ ವಾರವೇ ಹೇಳಬಹು ದಿತಲ್ಲ, ಇಷ್ಟಕ್ಕೋಸ್ಕರ ಮತ್ತೆ ಇಷ್ಟು ದೂರ ಬರ ಹೇಳುವ ಆವಶ್ಯಕತೆ ಏನಿತ್ತು?” ಎಂದು ತಂದೆ ಆಕ್ಷೇಪಿಸಿದಾಗ ವೈದ್ಯ ಹೇಳು ತಾನೆ “ನೋಡಿ, ಒಂದು ವಾರದ ಹಿಂದೆ ಇಲ್ಲಿ ಬೆಲ್ಲದ ಪೆಟ್ಟಿಗೆಗಳಿ ದ್ದವು. ನಾನು ಹುಡುಗನಿಗೆ ಬೆಲ್ಲ ತಿನ್ನಬಾರದು ಎಂದು ಆಗ ಹೇಳಿ ದ್ದರೆ ‘ಇವರೇ ಬೆಲ್ಲ ತಿನ್ನುತ್ತಾರೆ, ನನಗೆ ಮಾತ್ರ ಉಪದೇಶ ಮಾಡು ತ್ತಾರೆ’ ಎಂದು ಭಾವಿಸಿ ನನ್ನ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ಈಗ ಬೆಲ್ಲವನ್ನೆಲ್ಲ ತೆಗೆಸಿದ್ದೇನೆ. ಈಗ ನನ್ನ ಮಾತು ಕೇಳುತ್ತಾನೆ.”


“ಒಂದು ಆದರ್ಶಕ್ಕಾಗಿ ಬಾಳಿ; ಅದೊಂದೇ ಆದರ್ಶವಿರಲಿ; ನಿಮ್ಮ ಜೀವನದಲ್ಲಿ ಆದರ್ಶದ ಮೇಲೆ ಆಸೆ ಉತ್ಕಟವಾಗಿರಲಿ, ತೀವ್ರವಾಗಿರಲಿ. ಮನಸ್ಸಿನಲ್ಲಿ ಮತ್ತಾವುದಕ್ಕೂ ಎಡೆ ಇಲ್ಲದಿರಲಿ, ಮತ್ತಾವುದನ್ನೂ ಚಿಂತಿಸುವುದಕ್ಕೆ ಕಾಲವಿಲ್ಲದಿರಲಿ,” (ಕೃತಿಶ್ರೇಣಿ, ೭.೨೭) ಎಂದು ಸ್ವಾಮಿ ವಿವೇಕಾನಂದರು ಒತ್ತಿ ಹೇಳುತ್ತಾರೆ. ಒಂದು ಆದರ್ಶವಿದ್ದರೆ ನಮ್ಮ ಜೀವನಕ್ಕೆ ಒಂದು ನಿರ್ದಿಷ್ಟತೆ ಬರುತ್ತದೆ, ಅದು ಮುನ್ನಡೆಯುವುದಕ್ಕೆ ದಾರಿದೀಪವಾಗುತ್ತದೆ. ಇಲ್ಲದಿದ್ದರೆ ನಮ್ಮ ಜೀವನ ದಿಕ್ಕೂಚಿಯಿಲ್ಲದ ಹಡಗಿನಂತೆ ಗೊತ್ತುಗುರಿಯಿ ಲ್ಲದೆ ಮುಂದುವರಿಯುತ್ತದೆ. ಇದರಿಂದ ನಮ್ಮ ಶಕ್ತಿ ವ್ಯರ್ಥವಾಗಿ ಹೋಗುತ್ತದೆ, ಸುಮ್ಮನೆ ಕಾಲ ಕಳೆದುಹೋಗುತ್ತದೆ. ಜೀವನ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ.


ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಅರ್ಥವಿದೆ. ಅತ್ಯಂತ ಕ್ಷುದ್ರವಾದ ವಸ್ತುವೂ ಯಾವುದಾದರೊಂದು ಸಂದರ್ಭದಲ್ಲಿ ಯಾವುದಾದರೊಂದು ರೀತಿಯಲ್ಲಿ ಉಪಯುಕ್ತವಾಗುತ್ತದೆ, ಅದರ ಮೂಲಕ ಅದು ತನ್ನ ಅರ್ಥವನ್ನು ಪಡೆಯುತ್ತದೆ. ನಾವು ಅಸಹ್ಯ ಪಡುವ ಹೇಸಿಗೆಯೂ ಗಿಡಕ್ಕೆ ಗೊಬ್ಬರವಾಗಿ ತನ್ನ ಸಾರ್ಥಕತೆ ಯನ್ನು ಪಡೆಯುತ್ತದೆ. ಆದ್ದರಿಂದ ಈ ಪ್ರಪಂಚದಲ್ಲಿ ಯಾವುದೂ ನಿರರ್ಥಕವಲ್ಲ. ಒಂದು ನಿರ್ಜೀವ ವಸ್ತು ನಿರರ್ಥಕವಾದರೂ ಅದ ಕ್ಕೇನೂ ನಷ್ಟವಿಲ್ಲ, ವ್ಯಥೆಯೂ ಇಲ್ಲ, ಕಾರಣ ಅದಕ್ಕೆ ತನ್ನತನವಿಲ್ಲ -‘ನಾನು’ ಎಂಬ ಪ್ರಜ್ಞೆ ಇಲ್ಲ. ಆದರೆ ಪ್ರಜ್ಞಾವಂತ ಮಾನವನಿಗೆ ಈ ಅರ್ಥಹೀನತೆ ತುಂಬ ದುಃಖದಾಯಕವಾಗುತ್ತದೆ, ವ್ಯಕ್ತಿಯ ಬೆಳವಣಿಗೆಯನ್ನು ಕುಂಠಿಸುತ್ತದೆ. ಜೀವನ ಅರ್ಥಪೂರ್ಣವೆನಿಸಿ ದಾಗ ಅದು ಸಹ್ಯವಾಗುತ್ತದೆ, ಇಲ್ಲದಿದ್ದರೆ ಅದೊಂದು ಹೊರೆಯಾ ಗುತ್ತದೆ ತನಗೂ ಇತರರಿಗೂ, ಎಲ್ಲವನ್ನೂ ಸಾರ್ಥಕಗೊಳಿಸುವ ವ್ಯಕ್ತಿಜೀವನವೇ ನಿಃಸಾರ್ಥಕವಾದರೆ, ಅವನ ಪಾಲಿಗೆ ಎಲ್ಲವೂ ನಿಃಸಾರ್ಥಕವಾಗುತ್ತದೆ.

ಜೀವನದ ಅರ್ಥಹೀನತೆಯು ಮೂರು ಬಗೆಯ ಮಾನಸಿಕ ವ್ಯಾಧಿಗಳಿಗೆ ಕಾರಣವಾಗುತ್ತದೆ ಎಂದು ಮನಶ್ಯಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ: ದುಗುಡ (depression), ಹಿಂಸಾಪ್ರವೃತ್ತಿ (aggression) ಮತ್ತು ದುರ್ವ್ಯಸನ (addiction). ವ್ಯಕ್ತಿಗೆ ತನ್ನ ಜೀವನವು ತನಗಾಗಲಿ ಇತರರಿಗಾಗಲಿ ನಿರರ್ಥಕವಾದಾಗ ನಿರುತ್ಸಾಹ ಅವನನ್ನು ಆವರಿಸುತ್ತದೆ. ತನ್ನ ನಿರರ್ಥಕತೆಯ ಅರಿವು ಅವನಿ ಗಿಲ್ಲದೆಯೇ ಅವನು ನಿರುತ್ಸಾಹವನ್ನು ಅನುಭವಿಸುತ್ತಿರಬಹುದು ಸಾಮಾನ್ಯವಾಗಿ ನಿರುತ್ಸಾಹದ ಕಾರಣ ವ್ಯಕ್ತಿಗೆ ತಿಳಿದಿರುವುದಿಲ್ಲ. ತನ್ನ ದುಗುಡ ಅಥವಾ ನಿರುತ್ಸಾಹಕ್ಕೆ ಕಾರಣವನ್ನು ಅವನು ಹೊರಗೆ ಅರಸುತ್ತಾನೆ. ಕ್ರೂರ ಸಾಮಾಜಿಕ ಪರಿಸ್ಥಿತಿ, ಇತರ ವ್ಯಕ್ತಿಗಳು, ಅಥವಾ ಅದೃಷ್ಟ ಇತ್ಯಾದಿಗಳನ್ನು ಅವನು ದೂಷಿಸುತ್ತಾನೆ. ಇದರಿಂದ ಅವನ ಸಮಸ್ಯೆ ಇನ್ನೂ ತೀವ್ರವಾಗುತ್ತದೆ. ಯಾವುದೇ ರಚನಾತ್ಮಕ ಚಟು ವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲಾರದವನಾಗುತ್ತಾನೆ. ಈ ದುಗುಡತೆಯಿಂದಾಗಿ ಅವನು ತನ್ನನ್ನೂ ತಾನೇ ದ್ವೇಷಿಸತೊಡಗು ತಾನೆ. ಇದು ಅತಿರೇಕಕ್ಕೆ ಹೋದಾಗ ಅವನು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು.


ಜೀವನ ಅರ್ಥಹೀನವಾದಾಗ ಅದು ತನ್ನ ಮೌಲ್ಯವನ್ನು ಕಳೆದು ಕೊಳ್ಳುತ್ತದೆ. ಮೌಲ್ಯವಿಲ್ಲದುದನ್ನು ವ್ಯರ್ಥಗೊಳಿಸುವುದು ಸ್ವಾಭಾವಿಕ. ಕಾಡುಹರಟೆ, ವ್ಯರ್ಥ ಅಲೆದಾಟ, ದುರ್ವ್ಯಸನ (ಮದ್ಯಸೇವನೆ ಇತ್ಯಾದಿ) ಮುಂತಾದವುಗಳ ಮೂಲಕ ವ್ಯಕ್ತಿಯು ತನ್ನ ಜೀವನ ವನ್ನು ವ್ಯರ್ಥಗೊಳಿಸುತ್ತಾನೆ. ತನ್ನ ಜೀವನಕ್ಕೆ ಮೌಲ್ಯವನ್ನು ನೀಡ ದವನು ಇತರರ ಜೀವನಕ್ಕೂ ಮೌಲ್ಯವನ್ನು ನೀಡುವುದಿಲ್ಲ. ಇದರ ಪರಿಣಾಮವೇ ಹಿಂಸಾತ್ಮಕ ಕೃತ್ಯಗಳು ಭಯೋತ್ಪಾದನೆ ಮುಂತಾದವು
ಗಳು.


ಪ್ರತಿಯೊಬ್ಬರೂ ತಮ್ಮ ಜೀವನ ಅರ್ಥಪೂರ್ಣವಾಗಿ ಇರ ಬೇಕೆಂದು ಬಯಸುತ್ತಾರೆ. ಈ ಬಯಕೆ ಬೇರೆ ಬಯಕೆಗಳಿಗಿಂತಲೂ ತೀವ್ರವಾದುದೆಂದು ಮನಶ್ಯಾಸ್ತ್ರಜ್ಞರು ಹೇಳುತ್ತಾರೆ ಸುಖ, ಕೀರ್ತಿ, ಅಧಿಕಾರ ಇತ್ಯಾದಿ ಬಯಕೆಗಳಿಗಿಂತಲೂ ಅದು ತೀವ್ರವಾದು ದಂತೆ, “ಅರ್ಥೆಚೆ ಎಂಬುದು ಒಂದು ನಿರ್ದಿಷ್ಟವಾದ ಆವಶ್ಯಕತೆ. ಅದನ್ನು ಬೇರೆ ಆವಶ್ಯಕತೆಗಳಿಂದ ತುಂಬಲಾಗುವುದಿಲ್ಲ. ಅದು ಎಲ್ಲ ವ್ಯಕ್ತಿಗಳಲ್ಲಿಯೂ ಒಂದಲ್ಲ ಒಂದು ಪ್ರಮಾಣದಲ್ಲಿ ಇದ್ದೇ ಇಂದಿನ ಅಸಂಖ್ಯ ಆಕರ್ಷಣೆಗಳು, ಸ್ಪರ್ಧಾತ್ಮಕ ಧಾವಂತ ಜೀವನ, ತಾಂತ್ರಿಕತೆಯ ಪ್ರಭುತ್ವ, ಪ್ರತಿಯೊಂದು ಕ್ಷೇತ್ರದ ವ್ಯಾಪಾರೀಕರಣ ಗ್ರಾಹಕ ಮನೋಭಾವ ಇತ್ಯಾದಿ ಸಾಮಾಜಿಕ ಸನ್ನಿವೇಶಗಳಿಂದಾಗಿ ವ್ಯಕ್ತಿಯು ತನ್ನ ಜೀವನದಲ್ಲಿ ಒಂದು ಅರ್ಥವನ್ನು ಕಂಡುಕೊಳ್ಳು ವುದರಲ್ಲಿ ಅಸಮರ್ಥನಾಗುತ್ತಿದ್ದಾನೆ. ಜಾಗತೀಕರಣದ ಮಹಾ ಪ್ರವಾಹದಲ್ಲಿ ವ್ಯಕ್ತಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದ್ದಾನೆ. ವೈಜ್ಞಾನಿಕ ಆವಿಷ್ಕಾರಗಳು ಮನುಷ್ಯನನ್ನು ಒಂದು ಯಂತ್ರದ ಮಟ್ಟಕ್ಕೆ ಇಳಿ ಸಿವೆ. ಕಲ್ಪನಾತೀತ ವಿಶಾಲ ವಿಶ್ವದಲ್ಲಿ ಮಾನವನು ತನ್ನನ್ನು ಅತ್ಯಂತ ಕಿರಿದಾಗಿ ಕಂಡುಕೊಳ್ಳುತ್ತಿದ್ದಾನೆ. ಇಂತಹ ಹಲವಾರು ಅಂಶಗಳು ವ್ಯಕ್ತಿಯ ಜೀವನವನ್ನು ಅರ್ಥಹೀನಗೊಳಿಸಿವೆ, ಶೂನ್ಯತೆಯ ಭಾವ ಅವನ ಆಂತರ್ಯವನ್ನು ಆವರಿಸಿಕೊಂಡಿದೆ. “ನನ್ನೆಡೆಗೆ ಬರುವ ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು ಯಾವುದೇ ವೈದ್ಯಕೀಯ ಲಕ್ಷಣಗಳುಳ್ಳ ಮನೋರೋಗದಿಂದ ನರಳುತ್ತಿಲ್ಲ; ಆದರೆ ಜೀವನದ ಅರ್ಥಹೀನತೆಯಿಂದ ಶೂನ್ಯತೆಯಿಂದ ನರಳುತ್ತಿ ರುವವರು” ಎಂದು ಹೇಳುತ್ತಾರೆ. ಪ್ರಸಿದ್ಧ ಮನಃಶ್ಯಾಸ್ತ್ರಜ್ಞರಾದ
ಕಾರ್ಲ್ ಯೂಂಗ್


ಈ ಆಂತರಿಕ ಶೂನ್ಯತೆಯನ್ನು ಹೊರಗಿನ ವಿಷಯಗಳಿಂದ ತುಂಬಲು ವ್ಯಕ್ತಿಯು ಪ್ರಯತ್ನಿಸುತ್ತಾನೆ. ಅದಕ್ಕಾಗಿಯೇ ಅವನು ಹಣ, ಅಧಿಕಾರ, ಸ್ಥಾನಮಾನಗಳಿಗಾಗಿ ಹಾತೊರೆಯುತ್ತಾನೆ. ಯಾವಾಗಲೂ ಪ್ರಶಂಸೆಗಾಗಿ ಜಾತಕ ಪಕ್ಷಿಯಂತೆ ಬಾಯ್ದೆರೆದು ಕೊಂಡಿರುತ್ತಾನೆ. ತಾನು ಮಾಡಿದ, ಸಾಧಿಸಿದ ಕಾರ್ಯಕ್ಕೆ ಸಾಕಷ್ಟು ಮಾನ್ಯತೆ ಸಿಗದಿ ದ್ದಾಗ ಅತ್ಯಂತ ಪರಿತಪಿಸುತ್ತಾನೆ. ತನ್ನ ಸಾಧನೆಯಲ್ಲಿ ಸ್ವಲ್ಪ ಅಡೆ ತಡೆಯುಂಟಾದರೂ ಹತಾಶನಾಗುತ್ತಾನೆ. ಇದರಿಂದಾಗಿಯೇ ಬೇಕು ಬೇಡದ ಅನೇಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾನೆ. ಕೆಲ ವೊಮ್ಮೆ ಹೊಟ್ಟೆಬಾಕತನವೂ ಇದರ ಪರಿಣಾಮವೇ. ಆದರೆ ಆಂತರಿಕ ಖಾಲಿತನವನ್ನು ಹೊರಗಿನ ವಿಷಯಗಳಿಂದ ಭರ್ತಿಮಾಡಲಾಗುವು ದಿಲ್ಲ. ಎಷ್ಟೇ ಭರ್ತಿ ಮಾಡಿದರೂ ಅದು ಖಾಲಿಯಾಗಿಯೇ ಉಳಿ ಯುತ್ತದೆ. ಒಂದು ಸರೋವರದಲ್ಲಿ ನೀರು ತುಂಬಿಕೊಂಡಿರಬೇಕಾದರೆ ಅದರ ಕೆಳಗಡೆಯ ಸೆಲೆಯಿಂದ ನೀರು ಯಾವಾಗಲೂ ಜಿನುಗುತ್ತಿರ ಬೇಕು. ಹೊರಗಿನಿಂದ ಎಷ್ಟೇ ಭರ್ತಿ ಮಾಡಿದರೂ ಬೇಗ ಆರಿ ಹೋಗುತ್ತದೆ. ಹಾಗೆಯೇ ನಮ್ಮ ಅಂತರಂಗವೂ ತುಂಬಿಕೊಂಡಿರ ಬೇಕಾದರೆ ಆಧ್ಯಾತ್ಮಿಕ ಸೆಲೆ ತೆರೆದಿದ್ದು ಅದರಿಂದ ಆಧ್ಯಾತ್ಮಿಕ ಸತ್ತ ವನ್ನು ನಾವು ಪಡೆಯುತ್ತಿರಬೇಕು. ನಾವು ಅಂತರಂಗದಲ್ಲಿ ತುಂಬು ಜೀವನವನ್ನು ನಡೆಸಬೇಕು. ಪ್ರೀತಿ, ಸಹಾನುಭೂತಿ, ಒಳ್ಳೆಯತನ, ಪರೋಪಕಾರ ಬುದ್ದಿ ಹಾಗೂ ಆಧ್ಯಾತ್ಮಭಾವ ಇವು ಜೀವನಕ್ಕೆ ಸಾರ್ಥ ಕತೆಯನ್ನು ನೀಡುತ್ತವೆ. ಮಾನವರಾಗಿ ನಾವು ಇಂತಹ ಸಾರ್ಥಕತೆ ಯಲ್ಲಿಯೇ ಸುಖವನ್ನು ಕಾಣುವಂತಾಗಬೇಕು. ಇಂದ್ರಿಯ ವಿಷಯ ದಲ್ಲಲ್ಲ. ಇದೇ ಅತ್ಯಂತ ಮುಖ್ಯವಾದ ಮನುಷ್ಯತ್ವದ ಲಕ್ಷಣ.


ಧನಾರ್ಜನೆ, ಅಧಿಕಾರ, ಸ್ಥಾನಮಾನಾದಿ ಪ್ರಾಪಂಚಿಕ ಆದರ್ಶ ಗಳು ಜೀವನಕ್ಕೆ ನಿಜವಾದ ಅರ್ಥವನ್ನು ನೀಡಲಾರವು. ಏಕೆಂದರೆ ಜೀವನಕ್ಕೆ ಹೋಲಿಸಿದರೆ ಅವು ಕಡಿಮೆ ಬೆಲೆಯುಳ್ಳವು. ಇವುಗಳಿ ಗಾಗಿ ಜೀವನವನ್ನು ಖರ್ಚು ಮಾಡುವುದೆಂದರೆ ಚಿನ್ನವನ್ನು ಕೊಟ್ಟು ಸಾಮಾನ್ಯ ಲೋಹವನ್ನು ಕೊಂಡುಕೊಂಡಂತೆ. ಈ ಪ್ರಪಂಚದ ಎಲ್ಲ ಕ್ಕಿಂತಲೂ ಜೀವನವು ಅತ್ಯಮೂಲ್ಯವಾದುದು, ಏಕೆಂದರೆ ಎಲ್ಲಕ್ಕೂ ಮೌಲ್ಯವನ್ನು ನೀಡುವುದು ಮಾನವಜೀವನವೇ. ಆದ್ದರಿಂದಲೇ ವಿವೇಕಾನಂದರು ಹೇಳುತ್ತಾರೆ: “ಪ್ರಪಂಚದ ಎಲ್ಲ ಸಂಪತ್ತಿಗಿಂತಲೂ ಮಾನವರು ಹೆಚ್ಚು ಮೌಲ್ಯವುಳ್ಳವರು”


ಒಬ್ಬ ಉಪಾಧ್ಯಾಯನು ಕ್ಲಾಸಿಗೆ ಬಂದು ಜೇಬಿನಿಂದ ೫೦೦ ರೂಪಾಯಿನ ಗರಿಗರಿ ನೋಟನ್ನು ಹೊರಗೆ ತೆಗೆದನು. ವಿದ್ಯಾರ್ಥಿ ಗಳಿಗೆ ಸಂತೋಷಾಶ್ಚರ್ಯಗಳು ಒಮ್ಮೆಗೇ ಉಂಟಾದವು. ಆ ನೋಟನ್ನು ಎಲ್ಲರ ಮುಂದೆ ಹಿಡಿದು ಇದು ಯಾರಿಗೆ ಬೇಕು?” ಎಂದು ಕೇಳಿದನು. ಎಲ್ಲರೂ ಕೈ ಎತ್ತಿದರು. ಉಪಾಧ್ಯಾಯನು ಆ ನೋಟನ್ನು ಕೈಯಲ್ಲಿ ಹಿಸುಕಿ, ಮತ್ತೆ ಎಲ್ಲರಿಗೂ ತೋರಿಸಿ, ಇದು ಯಾರಿಗೆ ಬೇಕು?” ಎಂದು ಕೇಳಿದನು. ಮತ್ತೆ ಎಲ್ಲರೂ ಕೈ ಎತ್ತಿದರು. ಆ ನೋಟನ್ನು ಕಾಲಲ್ಲಿ ತುಳಿದು ಅದನ್ನು ಕೊಳೆಗೊಳಿಸಿ, ಮತ್ತೆ ತೋರಿಸಿ ಉಪಾಧ್ಯಾಯರು ಅದೇ ಪ್ರಶ್ನೆಯನ್ನು ಕೇಳಿದನು. ಈಗಲೂ ಎಲ್ಲರೂ ಕೈ ಎತ್ತಿದರು. ಈಗ ಉಪಾಧ್ಯಾಯನು ಈ ಪ್ರಯೋಗದ ಅರ್ಥವನ್ನು ವಿವರಿಸಿದನ: ಈ ನೋಟು ಯಾವುದೇ ಸ್ಥಿತಿಯಲ್ಲಿದ್ದರೂ, ಎಷ್ಟೇ ಕೊಳೆಯಾಗಿದ್ದರೂ ತನ್ನ ಮೌಲ್ಯವನ್ನು ಕಳೆದುಕೊಳ್ಳುವು ದಿಲ್ಲ. ಅದರ ೫೦೦ ರೂಪಾಯಿ ಬೆಲೆ ಹಾಗೇಉಳಿಯುತ್ತದೆ. ಹಾಗೆಯೇ ಮಾನವನು ಯಾವುದೇ ಸ್ಥಿತಿಯಲ್ಲಿದ್ದರೂ, ಎಷ್ಟೇ ಕೆಟ್ಟ ವನಾಗಿದ್ದರೂ ಅವನ ಜೀವನದ ಬೆಲೆ ನಷ್ಟವಾಗುವುದಿಲ್ಲ. ಎಂಥ ದುರಾತ್ಮನೂ ಮಹಾತ್ಮನಾಗುವ ಸಾಧ್ಯತೆಯಿದೆ, ದೈತ್ಯನೂ ದೇವತೆ ಯಾಗುವ ಸಾಧ್ಯತೆಯಿದೆ. ಉನ್ನತ ಆದರ್ಶವನ್ನು ಪಡೆದು ಅದಕ್ಕನು ಗುಣವಾಗಿ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದಾಗ ಜೀವನ ಮೌಲ್ಯವಂತವಾಗುತ್ತದೆ. ಶಿಕ್ಷಕರು ಉನ್ನತ ಆದರ್ಶಗಳನ್ನು ತಮ್ಮ ಜೀವನದ ಮೂಲಕ ಪ್ರತಿಬಿಂಬಿಸುತ್ತ ವಿದ್ಯಾರ್ಥಿಗಳು ಆದರ್ಶವನ್ನು ಅನುಸರಿಸುವಂತೆ ಮಾಡಬೇಕು.


ಮೂರು ಬಗೆಯ ವೈದ್ಯರಿರುವಂತೆ ಮೂರು ಬಗೆಯ ಗುರುಗಳಿ ರುವರೆಂದು ಶ್ರೀರಾಮಕೃಷ್ಣರು ಹೇಳುತ್ತಾರೆ. ಸಾಮಾನ್ಯ ವೈದ್ಯನು ರೋಗವನ್ನು ಗುರುತಿಸಿ ಔಷಧಿಯನ್ನು ಸೂಚಿಸುತ್ತಾನೆ. ಆದರೆ ರೋಗಿಯು ಔಷಧಿಯನ್ನು ತೆಗೆದುಕೊಳ್ಳುತ್ತಿರುವನೋ ಇಲ್ಲವೊ ಎನ್ನುವುದರ ಬಗ್ಗೆ ವಿಚಾರಿಸುವುದೇ ಇಲ್ಲ. ಹಾಗೆಯೇ ಸಾಮಾನ್ಯ ಗುರುವು ಕೇವಲ ಬೋಧಿಸುತ್ತಾನಷ್ಟೇ, ವಿದ್ಯಾರ್ಥಿಯು ಅದನ್ನು ಗ್ರಹಿಸುತ್ತಾನೆಯೇ ಎನ್ನುವುದರ ಬಗ್ಗೆ ಗಮನ ಕೊಡುವುದಿಲ್ಲ. ಅವನ ಕೆಲಸ ಪಾಠ ಮಾಡುವುದಷ್ಟೇ, ಅದರ ಫಲಾಫಲಗಳು ಅವನಿಗೆ ಮುಖ್ಯವಲ್ಲ. ಅವನಿಗೆ ಗುರುದಕ್ಷಿಣೆ ಅಥವಾ ಸಂಬಳವೇ ಮುಖ್ಯ. ಈ ರೀತಿ ಪಾಠ ಮಾಡುವುದರಿಂದ ಶಿಕ್ಷಕನ ಬುದ್ದಿಯೂ ಜಡವಾಗು ತದೆ. ವಿದ್ಯಾರ್ಥಿಯ ಬುದ್ಧಿಯೂ ಜಡವಾಗುತ್ತದೆ. ವಿದ್ಯಾರ್ಥಿಯು ಜ್ಞಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾನೆ.


ಮಧ್ಯಮ ವರ್ಗದ ವೈದ್ಯನು ಕೇವಲ ಔಷಧಿಯನ್ನು ಸೂಚಿಸು ವುದು ಮಾತ್ರವಲ್ಲದೆ ರೋಗಿಯು ಔಷಧಿಯನ್ನು ಸ್ವೀಕರಿಸುತ್ತಿರು ವನೇ, ಅವನ ರೋಗ ವಾಸಿಯಾಗುತ್ತಿರುವುದೇ ಎನ್ನುವುದರ ಬಗ್ಗೆ ಮತ್ತೆ ಮತ್ತೆ ವಿಚಾರಿಸುತ್ತಿರುತ್ತಾನೆ. ಹಾಗೆಯೇ ಮಧ್ಯಮ ವರ್ಗದ ಗುರುವು ತಾನು ಹೇಳುತ್ತಿರುವುದು ವಿದ್ಯಾರ್ಥಿಗೆ ಅರ್ಥವಾಗುತ್ತಿರು ವುದೇ ಎನ್ನುವುದರ ಬಗ್ಗೆ ಗಮನ ಹರಿಸುತ್ತಾನೆ. ವಿದ್ಯಾರ್ಥಿಗಳನ್ನು ಮತ್ತೆ ಮತ್ತೆ ಪ್ರಶ್ನಿಸಿ ಅವರು ಗ್ರಹಿಸುತ್ತಿರುವರೇ ಎನ್ನುವುದನ್ನು ಪರೀಕ್ಷಿಸುತ್ತಾನೆ.ಇದು ಶಿಕ್ಷಕನಿಗೆ ಶಿಷ್ಯನಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ. ಶಿಕ್ಷಕನಿಗೆ ತಮ್ಮಲ್ಲಿ ಆಸಕ್ತಿ ಇದೆ ಎನ್ನುವುದು ತಿಳಿದಾಗ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಓದುತ್ತಾರೆ. ಇಲ್ಲಿ ಮಾನವೀಯ ಸಂಪರ್ಕವುಂಟಾಗಿ ವಿದ್ಯಾರ್ಥಿಗಳು ಹೆಚ್ಚು ಮಾನ ವೀಯತೆಯನ್ನು ಬೆಳೆಸಿಕೊಳ್ಳಲು ಅನುವಾಗುತ್ತದೆ.


ಉತ್ತಮ ವೈದ್ಯ ರೋಗಿಯು ಔಷಧಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಾನೆ. ಅವಶ್ಯವಾದರೆ ಅವನ ಬಾಯಿಗೆ ಅದನ್ನು ತುರುಕುತ್ತಾನೆ. ಹಾಗೆಯೇ ಉತ್ತಮ ಗುರುವು ವಿದ್ಯಾರ್ಥಿಯು ಗ್ರಹಿಸುವವರೆಗೂ ಬಿಡದೆ ಮತ್ತೆ ಮತ್ತೆ ಪಾಠ ಹೇಳುತ್ತಾನೆ. ದಡ್ಡ ನನ್ನೂ ಬುದ್ಧಿವಂತನನ್ನಾಗಿ ಮಾಡುತ್ತಾನೆ. ಮಧ್ಯಮ ವರ್ಗದ ಶಿಕ್ಷಕ ಅರ್ಥವಾಗದ ವಿದ್ಯಾರ್ಥಿಗಳನ್ನು ಕಡೆಗಣಿಸಬಹುದು. ಆದರೆ ಉತ್ತಮ ಶಿಕ್ಷಕ ದಡ್ಡರ ಕಡೆಗೇ ಹೆಚ್ಚು ಗಮನ ಕೊಡುತ್ತಾನೆ. ಅವರೂ ಸುಲಭ ವಾಗಿ ಗ್ರಹಿಸುವಂತೆ ಪಾಠಮಾಡುವ ವಿಧಾನವನ್ನು ಕಂಡುಹಿಡಿಯು ತ್ತಾನೆ. ಹೀಗೆ ಕಲಿಕೆ ಇಲ್ಲಿ ನಿಕಟ ಮಾನವೀಯ ಸಂಪರ್ಕವಾಗಿ ಪರಿಣ ಮಿಸುತ್ತದೆ. ಇಂದಿನ ಯಂತ್ರೀಕರಣದ ಸಂದರ್ಭದಲ್ಲಿ ಕಲಿಕೆಯ ಲ್ಲಿಯೇ ಮಾನವೀಯತೆಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಔಚಿತ್ಯಪೂರ್ಣವಾದುದು.


ಸಾಮಾನ್ಯ ಶಿಕ್ಷಕ ಬೋಧಿಸುತ್ತಾನೆ, ಉತ್ತಮ ಶಿಕ್ಷಕ ಜ್ಞಾನ ವನ್ನು ನೀಡುತ್ತಾನೆ ಮತ್ತು ಶ್ರೇಷ್ಠ ಶಿಕ್ಷಕ ಸ್ಫೂರ್ತಿಯನ್ನೀಯುತ್ತಾನೆ —ಎಂಬ ಹೇಳಿಕೆಯೂ ಪ್ರಸಿದ್ಧವಾದುದು. ಸಾಮಾನ್ಯ ಶಿಕ್ಷಕನು ಕೇವಲ ಪಾಠ ಹೇಳುವುದರಷ್ಟರಲ್ಲೇ ತೃಪ್ತನಾಗುತ್ತಾನೆ. ಅಷ್ಟೂ ಮಾಡದೆ ಸಂಬಳ ತೆಗೆದುಕೊಳ್ಳುವ ಶಿಕ್ಷಕನಿಗಿಂತ ಇವನು ಉತ್ತಮ. ಆದರೆ ಉತ್ತಮ ಶಿಕ್ಷಕನು ಜ್ಞಾನವನ್ನು ನೀಡುತ್ತಾನೆ ವಿದ್ಯಾರ್ಥಿ ಗಳಲ್ಲಿ ಜ್ಞಾನಾಕಾಂಕ್ಷೆಯನ್ನು ಕೆರಳಿಸುತ್ತಾನೆ. “ವಿದ್ಯಾರ್ಥಿಗಳಲ್ಲಿ

Leave a Reply

Your email address will not be published. Required fields are marked *